ಗುಂಡ್ಲುಪೇಟೆ : ಲಾರಿ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ, ಗರ್ಭಿಣಿ ಸಾವನ್ನಪ್ಪಿರುವ ಘಟನೆ ಕೇರಳ ರಸ್ತೆಯ ಮದ್ದಯ್ಯನಹುಂಡಿ ಸಮೀಪ ನಡೆದಿದ್ದು ಭೀಕರತೆಯಲ್ಲಿ ಬದುಕುಳಿದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುಂಡ್ಲುಪೇಟೆ ಮಾರ್ಗವಾಗಿ ಕಪ್ಪು ಮಣ್ಣು ಹೊತ್ತು ತೆರಳುತ್ತಿದ್ದ ಕೆ ಎಲ್ 57 ಆರ್ 0161 ನೋಂದಣಿಯ ಲಾರಿಗೆ ಕೇರಳ ಮಾರ್ಗವಾಗಿ ಬರುತ್ತಿದ್ದ ಕೆ ಎಲ್ 13 ಎ ಡಬ್ಲ್ಯೂ 2307 ನೋಂದಣಿಯ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳದ ಕಣ್ಣೂರು ಮೂಲದ ಮುನೀರ್ ಹಾಗೂ ಗರ್ಭಿಣಿ ಮುನೀರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ಭೀಕರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದಾನೆ, ಘಟನಾ ಸ್ಥಳಕ್ಕೆ ತೆರಳಿದ ಗುಂಡ್ಲುಪೇಟೆ ಪೊಲೀಸರು ಮೃತ ದೇಹಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
03/05/2026 12:12 pm
LOADING...