ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಶಾಲಾ ಶಿಕ್ಷಕರ ಸಂಘದ ಚುನಾವಣೆ - ಗುರು ಪ್ರೇರಣಾ ಪೆನಲಗೆ ಭರ್ಜರಿ ಗೆಲವು

ಚಿಕ್ಕೋಡಿ:ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಘಟಕದ ಚುನಾವಣೆಯಲ್ಲಿ ಗುರು ಪ್ರೇರಣಾ ಪ್ಯಾನೆಲ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಚಿಕ್ಕೋಡಿ ನಗರದ ಇಂದಿರಾನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮತ್ತು ಎಣಿಕೆ ಪ್ರಕ್ರಿಯೆ ನಡೆಯಿತು . ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ಒಂಬತ್ತು ಪುರುಷ ಅಭ್ಯರ್ಥಿಗಳು ಮತ್ತು ಐದು ಮಹಿಳಾ ಅಭ್ಯರ್ಥಿಗಳ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಚಿಕ್ಕೋಡಿ ತಾಲೂಕಿನ ಒಟ್ಟು 685 ಶಿಕ್ಷಕ ಮತದಾರರಲ್ಲಿ 636 ಮತದಾರರು ಈ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

2026 ರಿಂದ 2031 ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಈ ಚುನಾವಣೆಯಲ್ಲಿ ಗುರು ಪ್ರೇರಣಾ ಪ್ಯಾನೆಲದ ಒಟ್ಟು ಹತ್ತು ಅಭ್ಯರ್ಥಿಗಳು ಗೆದ್ದಿದ್ದಾರೆ. ಇದರಲ್ಲಿ ಎನ್ ಜಿ ಪಾಟೀಲ್, ಎಸ್ ಎಸ್ ಖಡ್ಡ, ಪಿ.ಡಿ.ಮಜಲಟಿ ಮಹಾವೀರ ಕಾಂಬಳೆ, ಡಿ ಎಚ್ ಕಾಂಬಳೆ,ವಿಶ್ವನಾಥ್ ಧುಮಾಳ, ಡಿ. ಆರ್. ಚಲವಾದಿ ಮತ್ತು ಮಹಿಳಾ ಅಭ್ಯರ್ಥಿಗಳಾದ ಸಂಗೀತಾ ಗಿರಿಮಲ್ಲನವರ್, ಶೈಲಶ್ರೀ ಜೋಶಿ, ಸಿದವ್ವ ಬಡ್ಲಿ ವಿಜಯಶಾಲಿಯಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

03/05/2026 03:28 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ