ಬೆಳಗಾವಿ: ಕುರುಬ ಸಮಾಜದಿಂದ ಕುರುಬ ಕುಟುಂಬವನ್ನೇ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲೇ ನಡೆದಿರುವ ಆರೋಪ ಕೇಳಿ ಬಂದಿದೆ.
ದೇವಸ್ಥಾನ ಪೂಜೆ, ಪ್ರೀತಿ ವಿಚಾರಕ್ಕೆ ಪಂಚರಿಂದಲೇ ಕುರುಬ ಸಮಾಜದೊಳಗಿನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದಿದೆ. ನಮಗೂ ಬದುಕಲು ಅವಕಾಶ ಕೊಡಿ ಎಂದು ಬಹಿಷ್ಕಾರಕ್ಕೆ ಒಳಗಾದ ಸಾಂಬ್ರೆಕರ್ ಕುಟುಂಬ ಮನವಿ ಮಾಡಿಕೊಳ್ಳುತ್ತಿದೆ. ಈ ಕುಟುಂಬದ ಜೊತೆ ಯಾರಾದರೂ ಅಪ್ಪಿತಪ್ಪಿ ಮಾತನಾಡಿದರೆ ₹5000 ದಂಡ, ಕಟ್ಟಬೇಕು. ಮಾತನಾಡುವವರ ಮಾಹಿತಿ ಕೊಟ್ಟರೆ 1000 ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಇನ್ನೂ ಏನೂ ಅರಿಯದ ಐದು ವರ್ಷದ ಮಗುವಿನ ಜೊತೆಯೂ ಗ್ರಾಮಸ್ಥರು ಮಾತನಾಡುತ್ತಿಲ್ಲ. ಮದುವೆ, ಕಾರ್ಯಕ್ರಮಗಳಿಗೆ ಯಾರು ಆಹ್ವಾನ ಕೊಡುತ್ತಿಲ್ಲ. ತಡರಾತ್ರಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದುಷ್ಕರ್ಮಿಗಳ ಅಟ್ಟಹಾಸ ಮೆರೆದಿದ್ದಾರೆ. ದೂರು ನೀಡಿ ಹದಿನೈದು ದಿನವಾದರೂ ಹಿರೇಬಾಗೇವಾಡಿ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಭೇಟಿ, ನೀಡಿ ಪೊಲೀಸರು ವಾಪಸ್ ಹೋಗಿದ್ದಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಒಟ್ಟಿನಲ್ಲಿ ಜೀವ ಭಯದಲ್ಲಿ ಬದುಕುತ್ತಿರುವ ಕುಟುಂಬಕ್ಕೆ ಭದ್ರತೆ ಕಾಡುತ್ತಿದ್ದು, ಊರು ಬಿಡಿಸುತ್ತೇವೆ ಎಂದು ಗ್ರಾಮದ ಪಂಚರಿಂದ ಧಮಕಿ ಹಾಕಲಾಗುತ್ತಿದೆ. ಹಾಗಾಗಿ ಬೆಳಗಾವಿ ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
PublicNext
29/04/2026 12:59 pm
LOADING...