ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮೂವರ ಮೇಲೆ ತಲ್ವಾರನಿಂದ ಹಲ್ಲೆ

ಬೆಳಗಾವಿ: ಮೂವರ ಯುವಕರ ಮೇಲೆ ತಲ್ವಾರನಿಂದ ದಾಳಿ ಮಾಡಿರುವ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.

ಹಳೇ ವೈಷಮ್ಯ ಹಿನ್ನೆಲೆ ಅಮನ್ ನಗರದ ವಲಿ ಶೇಖ್, ಇಮಾಮ್ ಶೇಖ್, ಮಜೀದ್ ಶೇಖ್ ಎಂಬುವವರ ಮೇಲೆ ತಲ್ವಾರ ದಾಳಿ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಲ್ಲೆಗೆ ಒಳಗಾದ ಮೂವರು ಯುವಕರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಳಮಾರುತಿ ಪೊಲೀಸರು ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

Edited By : Shivu K
PublicNext

PublicNext

05/05/2026 09:06 pm

Cinque Terre

11.22 K

Cinque Terre

0

ಸಂಬಂಧಿತ ಸುದ್ದಿ