ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಕರೋಶಿ ಆಸ್ಪತ್ರೆ ಮೇಲೆ ರೇಡ್! ಹೈ-ಡೋಸ್ ಔಷಧಿ ನೀಡಿ ಮೋಸ: ನಕಲಿ ವೈದ್ಯರಿಗೆ ಡಿಎಚ್‌ಒ ಶಾಕ್!

ಚಿಕ್ಕೋಡಿ: ಕರೋಶಿಯಲ್ಲಿ ನಕಲಿ ಡಾಕ್ಟರ್‌ಗಳಿಗೆ ಡಿಎಚ್‌ಒ ತಂಡ ಬಿಗ್ ಶಾಕ್ ಕೊಟ್ಟಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ್ ನೇತೃತ್ವದ ಏಳು ತಂಡಗಳು ಒಂದೇ ಟೈಮ್‌ಗೆ ಗ್ರಾಮದ ಆಸ್ಪತ್ರೆ-ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ದಾಖಲೆಗಳು, ಔಷಧಿ, ಚಿಕಿತ್ಸೆ ಪದ್ಧತಿ ಎಲ್ಲವನ್ನೂ ಚೆಕ್ ಮಾಡಿದ್ದಾರೆ.

ಕೆಲವರು ಮೆಡಿಕಲ್ ಓದಿಲ್ಲ, ಆದರೂ ಡಾಕ್ಟರ್ ಅಂತ ಕುಳಿತು ಹಾಯ್‌ಡೋಸ್ ಔಷಧಿ ಕೊಡುತ್ತಿದ್ದಾರೆ ಅಂತ ಬಂದ ದೂರು ಮೇರೆಗೆ ಈ ಆಪರೇಷನ್ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಡೆದ ಈ ದಾಳಿಯಲ್ಲಿ ಆರೋಗ್ಯ ಇಲಾಖೆ, ಕೆಪಿಎಂಇ, ತಾಲೂಕು ಆರೋಗ್ಯಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರನ್ನೊಳಗೊಂಡ ಏಳು ತಂಡಗಳು ದಿನವಿಡೀ ಕರೋಶಿ ಸುತ್ತಾಡಿ ಆಸ್ಪತ್ರೆಗಳ ತಪಾಸಣೆ ಮಾಡಿದ್ದಾರೆ.

ಔಷಧಿ ಸ್ಟಾಕ್, ವೈದ್ಯರ ವಿದ್ಯಾರ್ಹತೆ, ಆಸ್ಪತ್ರೆ ಪರವಾನಗಿ ಎಲ್ಲದರ ಮೇಲೂ ಸೂಕ್ಷ್ಮ ಪರಿಶೀಲನೆ ನಡೆಯಿತು. ತಂಡ ಬರೋ ಸುದ್ದಿ ಸಿಗುತ್ತಿದ್ದಂತೆಯೇ ಕೆಲ ಡಾಕ್ಟರ್‌ಗಳು ಆಸ್ಪತ್ರೆ ಕದ ಹಾಕಿಕೊಂಡು ಜಾರಿದರು ಅನ್ನೋ ಮಾತು ಕೂಡ ಕೇಳಿಬಂತು.

“ಬಹಳ ದಿನಗಳಿಂದ ಕರೋಶಿ ಮೇಲೆ ದಾಳಿ ಪ್ಲಾನ್ ಇತ್ತು. ಈಗ ಪರಿಶೀಲನೆ ಮಾಡಿದ್ದೇವೆ, ರಿಪೋರ್ಟ್ ಜಿಲ್ಲಾ ಸಮಿತಿಗೆ ಹೋಗುತ್ತದೆ. ಕಾನೂನು ಬಾಹಿರವಾಗಿ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಖಚಿತ,” ಅಂತ ಡಿಎಚ್‌ಒ ಡಾ. ಗಡಾದ್ ಹೇಳಿದರು.

ಬೆಳಗ್ಗೆ ಒಂದೇ ಸಲ ಏಳು-ಎಂಟು ವಾಹನಗಳು ಊರೊಳಗೆ ನುಗ್ಗಿ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದರಿಂದ ಕರೋಶಿ ಜನಕ್ಕೆ ಅಚ್ಚರಿ ಮೂಡಿದೆ. ಮುಂದಿನ ತನಿಖೆಯಿಂದ ಡಾಕ್ಟರ್‌ಗಳ ಅಸಲಿ ಮುಖವಾಡ ಬಯಲಿಗೆ ಬರಲಿದೆ.

Edited By : Vinayak Patil
PublicNext

PublicNext

06/05/2026 09:30 am

Cinque Terre

8.11 K

Cinque Terre

0

ಸಂಬಂಧಿತ ಸುದ್ದಿ