ಗದಗ : ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊತ್ತಿರುವ ಲಕ್ಕುಂಡಿಯ ಪುರಾತತ್ವ ಸಂಪತ್ತು ಇಂದಿನ ಪೀಳಿಗೆಗೆ ಅಚ್ಚರಿಯ ವಿಷಯವಾಗಿದೆ. ಆ ಕಾಲದ ಶಿಲ್ಪಿಗಳ ಪ್ರತಿಭೆ, ಶ್ರಮ ಮತ್ತು ಕಲಾತ್ಮಕತೆ ಎಷ್ಟು ಉನ್ನತ ಮಟ್ಟದಲ್ಲಿತ್ತು ಎಂಬುದಕ್ಕೆ ಇಲ್ಲಿ ದೊರೆಯುತ್ತಿರುವ ವಸ್ತುಗಳೇ ಸಾಕ್ಷಿ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಲಕ್ಕುಂಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಸ್ಥರು ಪುರಾತತ್ವ ವಸ್ತುಗಳನ್ನು ಸ್ವಯಂ ಪ್ರೇರಿತವಾಗಿ ಸರ್ಕಾರಕ್ಕೆ ಒಪ್ಪಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಹಳೆಯ ನಾಣ್ಯಗಳು, ಮುತ್ತು-ರತ್ನಗಳು ಸೇರಿದಂತೆ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ನೀಡುತ್ತಿರುವುದು ಲಕ್ಕುಂಡಿಯ ಮಹತ್ವವನ್ನು ರಾಜ್ಯಾದ್ಯಂತ ಹೊರಹಾಕುತ್ತಿದೆ ಎಂದು ತಿಳಿಸಿದರು.
ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅನ್ವೇಷಣಾ ಕಾರ್ಯಗಳು ಲಕ್ಕುಂಡಿಯನ್ನು ಮತ್ತಷ್ಟು ಪ್ರಸಿದ್ಧಿಗೊಳಿಸುತ್ತಿವೆ. ಕೇವಲ ಬಂಗಾರದ ಆಕರ್ಷಣೆಯಷ್ಟೇ ಅಲ್ಲದೆ, ಶಿಲ್ಪಕಲೆ, ಶಿಲಾನ್ಯಾಸಗಳು ಹಾಗೂ ಗತ ವೈಭವದ ಅನೇಕ ಅಮೂಲ್ಯ ಅಂಶಗಳು ಇಲ್ಲಿ ಅಡಗಿವೆ. ಲಕ್ಕುಂಡಿಯಲ್ಲಿ ಈಗಾಗಲೇ ಪತ್ತೆಯಾಗಿರುವ ವಸ್ತುಗಳು ಕೇವಲ ಪ್ರಾರಂಭ ಮಾತ್ರ. ಇನ್ನಷ್ಟು ಅನ್ವೇಷಣೆ ಮಾಡಿದರೆ ಹೊಸ ಲಕ್ಕುಂಡಿಯೇ ಮೂಡಿಬರುವಷ್ಟು ಪುರಾತತ್ವ ಸಂಪತ್ತು ಸಿಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
Kshetra Samachara
03/05/2026 07:15 pm
LOADING...