ಶಿರಹಟ್ಟಿ: ಶಾಸಕರ ನೇತೃತ್ವದಲ್ಲಿ ನಡೆಯಬೇಕಿದ್ದ ತ್ರೈಮಾಸಿಕ (ಮೂರು ತಿಂಗಳಿಗೊಮ್ಮೆ)ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆದು ಬರೋಬ್ಬರಿ 7 ತಿಂಗಳು ಕಳೆದರೂ ಇನ್ನೂ ಕೂಡಾ ನಡೆದಿಲ್ಲ, ಹೀಗೆ ಆದರೆ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಕಳೆದ ವರ್ಷ ಸೆಪ್ಟೆಂಬರ್ 12/2025 ರಂದು ನಡೆದಿತ್ತು. ಆದರೆ ಮತ್ತೆ ತ್ರೈಮಾಸಿಕ ಸಭೆ ನಡೆಯದೆ ಬರೋಬ್ಬರಿ 7 ತಿಂಗಳು ಕಳೆದಿವೆ. ಇದರಿಂದಾಗಿ ಇಲಾಖೆವಾರು ನಡೆಯುವ ಅಭಿವೃದ್ಧಿ ಕಾಮಗಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಹೇಗೆ ದೊರೆಯುತ್ತದೆ.
ಕನಿಷ್ಠ 3 ತಿಂಗಳಿಗೊಮ್ಮೆ ನಡೆಯಬೇಕಾದ ಸಭೆ ತಿಂಗಳು ಕಳೆದರೂ ನಡೆದಿಲ್ಲ ಹೀಗೆ ಆದರೆ ಆಡಳಿತ ವ್ಯವಸ್ಥೆಯನ್ನು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಪ್ರಶ್ನೆ ಮಾಡುವವರು ಯಾರೂ ಇಲ್ಲದಂತಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಶಾಸಕ ಡಾ ಚಂದ್ರು ಲಮಾಣಿ ಅವರು ಕೆ.ಡಿ.ಪಿ ಸಭೆ ಕೈಗೊಂಡು ಇಲಾಖೆವಾರು ಪ್ರಗತಿ ಪರಿಶೀಲನೆ ನಡೆಸುತ್ತಾರಾ ಎಂದು ಕಾದು ನೋಡಬೇಕಿದೆ.
ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
PublicNext
29/04/2026 12:20 pm
LOADING...