ರಹಟ್ಟಿ : ಗ್ರಾಮದಲ್ಲಿ ಮಹಿಳೆಯರು ಬಯಲು ಜಾಗದಲ್ಲಿ ಮಲ ವಿಸರ್ಜನೆಗೆ ಹೋಗುವುದನ್ನು ತಡೆಯಲು, ಸರಕಾರ ಶೌಚಾಲಯಗಳನ್ನು ನಿರ್ಮಿಸಲು ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ. ಆದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷದಿಂದ ಆ ಶೌಚಾಲಯಗಳು ಇಂದಿಗೂ ಕೂಡ ಸಾರ್ವಜನಿಕರ ಉಪಯೋಗಕ್ಕೆ ದೊರೆಯದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಹೌದು.... ಈಗ ನಾವು ಹೇಳುತ್ತಿರುವುದು ಶಿರಹಟ್ಟಿ ತಾಲೂಕು ಮಾಗಡಿ ಗ್ರಾಮದಲ್ಲಿ ನಾಲ್ಕು ವರೆ ವರ್ಷಗಳ ಹಿಂದೆಯೇ ಕಟ್ಟಲು ಶುರುವಾದ ಗೌರವ ಘಟಕ ಇನ್ನೂ ಉದ್ಘಾಟನೆಯಾಗಿಲ್ಲ, ಕಟ್ಟಡದ ಕೆಲಸ ಸಂಪೂರ್ಣ ಮುಗಿದು 12 ತಿಂಗಳು ಕಳೆದರು ಇನ್ನೂ ಉದ್ಘಾಟನೆಯಾಗಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸ ಆದಷ್ಟು ಬೇಗನೆ ಈ ಗೌರವ ಘಟಕದ ಉದ್ಘಾಟನೆ ಮಾಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ವರದಿ : ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
PublicNext
05/05/2026 04:52 pm
LOADING...