ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಹಟ್ಟಿ: ಗೋವುಗಳ ರಕ್ಷಣೆಗೆ ಎಲ್ಲರೂ ಕಂಕಣ ಬದ್ಧರಾಗಬೇಕು - ಸಂತೋಷ ಕುರಿ

ಶಿರಹಟ್ಟಿ: ಭಾರತ ದೇಶದಲ್ಲಿ ಗೋ ಮಾತೆಗೆ ವಿಶೇಷ ಸ್ಥಾನವನ್ನು ನೀಡಿ ಭಾರತೀಯರು ಪೂಜಿಸುತ್ತಾ ಬಂದಿದ್ದೇವೆ, ಇಂದಿನ ಸರ್ಕಾರಗಳು ಗೋ ಹತ್ಯೆ ಕಾಯ್ದೆಯನ್ನು ಇನ್ನೂ ಕಠಿಣ ಮಾಡಿ ಗೋ ಹತ್ಯೆಯನ್ನು ತಡೆಗಟ್ಟಬೇಕು ಅದರ ಜೊತೆಗೆ ಪ್ರತಿಯೊಬ್ಬ ಪ್ರಜೆನೂ ಕೂಡಾ ಗೋವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಹಿಂದೂ ಪರ ಸಂಘಟನೆಗಳ ಮುಖಂಡ ಸಂತೋಷ ಕುರಿ ಹೇಳಿದರು

ಸೋಮವಾರ ಪಟ್ಟಣದಲ್ಲಿನ ಹಿಂದೂ ಪರ ಸಂಘಟನೆಗಳು ತಹಶೀಲ್ದಾರ್ ಕಚೇರಿಗೆ ಆಗಮಿಸಿ ಗೋ ಹತ್ಯೆಯನ್ನು ನಿಷೇಧಿಸಬೇಕೆಂದು ತಹಶೀಲ್ದಾರ್ ಅವರು ಮೂಲಕ ಗೋಹತ್ಯೆ ನಿಷೇಧಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರಾದ ನಾಗರಾಜ ಲಕ್ಕುಂಡಿ, ರಾಮಣ್ಣ ಕಂಬಳಿ,ಪ್ರವೀಣಗೌಡ ಪಾಟೀಲ್, ರಾಜು ರಡ್ಡಿ ಬೊಮ್ಮನಕಟ್ಟಿ ಫಕೀರೇಶ ರಟ್ಟೀಹಳ್ಳಿ, ಶ್ರೀನಿವಾಸ ಬಾರಬಾರ, ವೀರಣ್ಣ ಅಂಗಡಿ, ಬಸವರಾಜ ಕಲ್ಯಾಣಿ, ಮುಂತಾದವರು ಇದ್ದರು.

Edited By : PublicNext Desk
PublicNext

PublicNext

27/04/2026 09:17 pm

Cinque Terre

9.23 K

Cinque Terre

0

ಸಂಬಂಧಿತ ಸುದ್ದಿ