ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಕ್ರಿಯಾಶೀಲರಾಗಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಮಹೇಶ್ ಪಾಟೀಲ್ ಕರೆ

ಗದಗ: ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಪ್ರಾಮಾಣಿಕತೆ ಪರಿಶ್ರಮ ದಿಂದ ಯಾವುದೇ ಕೆಲಸದಲ್ಲಿ ಮುನ್ನುಗ್ಗಿದಾಗ ಖಂಡಿತವಾಗಿ ಯಶಸ್ಸು ಕಾಣಲು ಸಾಧ್ಯ ಎಂದು ಬೆಂಗಳೂರಿನ ಹರ್ಮನ್ ಮಿಲ್ಲರ್ ಕಂಪನಿಯ ಮಹೇಶ್ ಪಾಟೀಲ್ ಅಭಿಪ್ರಾಯ ಪಟ್ಟರು ಲಕ್ಷ್ಮೇಶ್ವರ ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜರುಗಿದ ಮಿಲಾಂಜ್ -2026 ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಅವರು ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು ಹೊಸ ಹೊಸ ಅನ್ವೇಷಣೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಡಾ.ಪರಶುರಾಮ ಬಾರಕಿ ವಹಿಸಿದ್ದರು ಡಾ ಸುಭಾಸ್ ಮೇಟಿ ಪ್ರೊ ವಿಕ್ರಂ ಶಿರೋಳ, ಡಾ ಆರ್ ಎಂ ಪಾಟೀಲ ಡಾ ಗಿರೀಶ್ ಯತ್ತಿನಹಳ್ಳಿ,ಪ್ರೊ ಈರಣ್ಣ ಮಕರಬ್ಬಿ, ಪ್ರೊ ಪ್ರತಿಮಾ ಮಹಾಪುರುಷ,ಪ್ರೊ ಗಿರೀಶ್ ಹಳ್ಳಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಮತ್ತು ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರ್ಷಿಣಿ ಮಡಿವಾಳರ ಮತ್ತು ವರ್ಷಿಣಿ ಮಾಳಗಿ ಕಾರ್ಯಕ್ರಮ ನಿರ್ವಹಿಸಿದವು.ನಂತರ ವಿವಿಧ ವಿಭಾಗಗಳಿಂದ ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಪರ್ಧೆಗಳು ಜರುಗಿದವು.

Edited By : PublicNext Desk
Kshetra Samachara

Kshetra Samachara

25/04/2026 09:54 pm

Cinque Terre

6.3 K

Cinque Terre

0

ಸಂಬಂಧಿತ ಸುದ್ದಿ