ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರ್ಮದಾ ದೋಣಿ ದುರಂತ: ಸಾವಿನ ಸಂಖ್ಯೆ 13ಕ್ಕೆ ಏರಿಕೆ, ಜಬಲ್‌ಪುರದಲ್ಲಿ ಶೋಕಸಾಗರ.!

ಮಧ್ಯಪ್ರದೇಶದ ಜಬಲ್‌ಪುರ ಸಮೀಪದ ಬಾರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ಸಂಭವಿಸಿದ ಕ್ರೂಸ್ ದೋಣಿ ದುರಂತದ ಕರಾಳತೆ ಮುಂದುವರಿದಿದ್ದು, ನಾಪತ್ತೆಯಾಗಿದ್ದವರ ಪತ್ತೆಗಾಗಿ ನಡೆಯುತ್ತಿದ್ದ ತೀವ್ರ ಕಾರ್ಯಾಚರಣೆ ವೇಳೆ ಎರಡು ಶವಗಳು ಪತ್ತೆಯಾದ ಬಳಿಕ ಸಾವಿನ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ.

ದುರಂತದಲ್ಲಿ ಮೃತಪಟ್ಟವರನ್ನು ಖಮರಿಯಾದ ಆರ್ಡನೆನ್ಸ್ ಫ್ಯಾಕ್ಟರಿಯ ಉದ್ಯೋಗಿಯ ಮಗ ಮಯೂರಾಮ್ ಮತ್ತು ಅವರ ಚಿಕ್ಕಪ್ಪ, 50 ವರ್ಷದ ಕಾಮರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಕುಟುಂಬಸ್ಥರು ಹಾಗೂ ರಕ್ಷಣಾ ಪಡೆಗಳು ಅವರಿಗಾಗಿ ಹುಡುಕಾಡುತ್ತಿದ್ದವು. ಇಂದು ಬೆಳಗ್ಗೆ ಅಣೆಕಟ್ಟಿನಿಂದ ಅವರ ಪಾರ್ಥಿವ ಶರೀರಗಳನ್ನು ಹೊರತೆಗೆಯಲಾಗಿದ್ದು, ಇದು ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗಿಸಿದೆ.

ಗುರುವಾರ ಸಂಜೆ ಪ್ರವಾಸಿಗರು ಕ್ರೂಸ್ ದೋಣಿಯಲ್ಲಿ ನರ್ಮದಾ ನದಿಯ ಸೌಂದರ್ಯವನ್ನು ಸವಿಯುತ್ತಿದ್ದಾಗ ದುರಂತ ಸಂಭವಿಸಿದೆ. ಏಕಾಏಕಿ ಹವಾಮಾನ ವೈಪರೀತ್ಯ ಉಂಟಾಗಿ, ಬಲವಾದ ಬಿರುಗಾಳಿ ಬೀಸಿದ್ದರಿಂದ ದೋಣಿ ಅಸಮತೋಲನಗೊಂಡು ನೀರಿನಲ್ಲಿ ಮುಳುಗಿದೆ. ಈ ಘಟನೆಯಲ್ಲಿ ಅನೇಕರು ಸ್ಥಳದಲ್ಲೇ ಜಲಸಮಾಧಿಯಾದರೆ, ಇನ್ನು ಕೆಲವರು ನಾಪತ್ತೆಯಾಗಿದ್ದರು. ದುರಂತದ ತೀವ್ರತೆಯನ್ನು ಅರಿತ ಸರ್ಕಾರವು ಕೂಡಲೇ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು.

ಅಧಿಕಾರಿಗಳ ಪ್ರಕಾರ, ನದಿಯ ಆಳ ಮತ್ತು ಹೂಳಿನ ಕಾರಣದಿಂದಾಗಿ ಶೋಧ ಕಾರ್ಯ ಸವಾಲಿನಿಂದ ಕೂಡಿತ್ತು. ಆದರೂ, ನಿರಂತರ ಪ್ರಯತ್ನದ ಫಲವಾಗಿ ನಾಪತ್ತೆಯಾದವರ ದೇಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಪ್ರವಾಸಿಗರ ಸುಂದರ ಪಯಣವೊಂದು ಹೀಗೆ ಸ್ಮಶಾನ ಮೌನದಲ್ಲಿ ಅಂತ್ಯಗೊಂಡಿರುವುದು ಇಡೀ ಜಬಲ್‌ಪುರ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.

Edited By :
PublicNext

PublicNext

03/05/2026 08:14 pm

Cinque Terre

12.72 K

Cinque Terre

0

ಸಂಬಂಧಿತ ಸುದ್ದಿ