ಹಾನಗಲ್: ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏರ್‌ಬಾರ್ನ್ ಜಿಯೋಲಾಜಿಕಲ್ ಸರ್ವೆ ಕಾರ್ಯ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲೂ ಇಂದು ಲಘು ವಿಮಾನ ಹಾರಾಟ ನಡೆಸಲಾಯಿತು. ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಾನಗಲ್ ಪಟ್ಟಣದ ಮೇಲೆ ಕಡಿಮೆ ಎತ್ತರದಲ್ಲಿ ಏರ್‌ಕ್ರಾಫ್ಟ್ ಹಾರಾಟ ನಡೆಸುತ್ತಿದ್ದು, ಇದು ಕೇವಲ ಜಿಯೋಲಾಜಿಕಲ್ ಸರ್ವೆ ಕಾರ್ಯಕ್ಕೆ ಸೀಮಿತವಾಗಿದೆ. ಸ್ಪಷ್ಟ ಭೂವೈಜ್ಞಾನಿಕ ಸಾಮರ್ಥ್ಯ (OGP) ಎಂದು ವರ್ಗೀಕರಿಸಲಾದ ಪ್ರದೇಶಗಳಲ್ಲಿ ಸಂಭಾವ್ಯ ಖನಿಜ ನಿಕ್ಷೇಪಗಳನ್ನು ಗುರುತಿಸಲು ವಿಮಾನದ ಮೂಲಕ ಈ ಯೋಜನೆ ಕೈಗೊಳ್ಳಲಾಗಿದೆ.
ಈ ಹಾರಾಟದಿಂದ ಯಾವುದೇ ಅಪಾಯವಿಲ್ಲ. ಸಾರ್ವಜನಿಕರು ಭಯ ಪಡಬೇಕಾಗಿಲ್ಲ ಎಂದು ಅಧಿಕಾರಿಗಳು ಪಬ್ಲಿಕ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.
-ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್
PublicNext
03/05/2026 09:32 pm
LOADING...