ಹಾನಗಲ್ : ಹಾನಗಲ್ ಪಟ್ಟಣದ ಶಾಸಕರ ಮಾದರಿ ಶಾಲೆ ಹಾಗೂ ಪೊಲೀಸ್ ವಸತಿಗೃಹಗಳ ಮಧ್ಯದಲ್ಲಿರುವ ನವ ನಗರಕ್ಕೆ ತೆರಳುವ ರಸ್ತೆ ಕಳೆದ 4-5 ವರ್ಷಗಳಿಂದ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು .
ಅಷ್ಟೇ ಅಲ್ಲದೆ ತಾಲೂಕಿನ ತಹಶೀಲ್ದಾರ್, ಪಿಎಸ್‌ಐ ಹಾಗೂ ಸಿಪಿಐ, ಸಮಾಜ ಕಲ್ಯಾಣಾಧಿಕಾರಿ, ಸಿಡಿಪಿಒ, ಕೃಷಿ ಅಧಿಕಾರಿಗಳು ದಿನಕ್ಕೆರಡು ಬಾರಿಯಾದರೂ ಈ ದೊಡ್ಡ ದೊಡ್ಡ ಗುಂಡಿಗಳನ್ನು ದಾಟಿಕೊಂಡೇ ಸಂಚರಿಸುವ ಸ್ಥಿತಿ ಎದುರಾಗಿತ್ತು. ಶಾಲಾ ಮಕ್ಕಳಿಗೂ ಈ ರಸ್ತೆಯಲ್ಲಿ ಓಡಾಡುವುದು ದೊಡ್ಡ ಸವಾಲಾಗಿತ್ತು.
ಈ ರಸ್ತೆಯ ದುರವಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ಸಲುವಾಗಿ, ಪಬ್ಲಿಕ್ ನೆಕ್ಸ್ಟ್ 'ಹದಗೆಟ್ಟು ಹೋಗಿರುವ ರೋಡು- ನವನಗರ ನಿವಾಸಿಗಳ ಗೋಳು' ಎಂಬ ಶೀರ್ಷಿಕೆಯಡಿ ಸವಿಸ್ತಾರವಾದ ವರದಿಯನ್ನು ಪ್ರಕಟಿಸಿತ್ತು.
ಪಬ್ಲಿಕ್ ನೆಕ್ಸ್ಟ್ ಪ್ರಕಟಿಸಿದ ವರದಿಗೆ ತಕ್ಷಣವೇ ಸ್ಪಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಲೋಕೋಪಯೋಗಿ ಇಲಾಖೆಯಿಂದ ಅಂದಾಜು 95 ಲಕ್ಷ ರೂ. ವೆಚ್ಚದಲ್ಲಿ (ಸಿ.ಸಿ.) ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ನವನಗರದ ನಿವಾಸಿಗಳ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಈ ಹೊಸ ರಸ್ತೆಯಿಂದಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸಂಚಾರ ಸುಗಮಗೊಂಡಿದೆ.
ಲೋಕೇಶ್ ಸುಣಗಾರ ಪಬ್ಲಿಕ್ ನೆಕ್ಸ್ಟ್ ಹಾನಗಲ್
PublicNext
06/05/2026 07:14 am
LOADING...