ಹಾವೇರಿ: ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಆರು ವರ್ಷಗಳಿಂದ ಸುಸಜ್ಜಿತ ಈಜುಕೊಳ ನಿರ್ಮಿಸಲಾಗಿತ್ತು. ಆದರೆ 2020 ರಲ್ಲಿ ಕೊರೊನಾ ಕಾಣಿಸಿಕೊಂಡ ವೇಳೆ ಬಂದಾಗಿರುವ ಈಜುಕೊಳ ಮತ್ತೆ ಕಾರ್ಯಾರಂಭ ಮಾಡಿಲ್ಲ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುಪರ್ದಿಯಲ್ಲಿರುವ ಈಜುಕೊಳ ತೆರೆದಿದ್ದು ಕೇವಲ ಕೆಲವೇ ಕೆಲವು ತಿಂಗಳು ಮಾತ್ರ.
ಉಳಿದಂತೆ ಈಜುಕೊಳ ಈಜಲು ಬಾರದೆ ಹಾಳಾಗಿದ್ದೆ ಹೆಚ್ಚು. ಕೊರೊನಾ ಕಾಲದಲ್ಲಿ ಬಂದಾಗಿರುವ ಈಜುಕೊಳ ಈ ವರ್ಷ ಆರಂಭವಾಗುತ್ತೆ ಈ ವರ್ಷ ಆರಂಭವಾಗುತ್ತೆ ಎಂದು ಕಾದುನೋಡುವುದೇ ಹಾನಗಲ್ ನಿವಾಸಿಗಳ ಕೆಲಸವಾಗಿದೆ.
ಈಜುಕೊಳ ಬಂದ್ ಆಗಿದ ನಂತರ ಹಲವು ಅಧಿಕಾರಿಗಳು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಬಂದು ಹೋಗಿದ್ದಾರೆ ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
PublicNext
02/05/2026 10:34 pm
LOADING...