ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ : ಕ್ಯಾಸನೂರು ಗ್ರಾಮದಲ್ಲಿ ಮೂರುವರೆ ವರ್ಷ ಕಳೆದರೂ ಇನ್ನೂ ಮುಗಿಯದ ಜಲಜೀವನ್ ಮಿಷನ್ ಕಾಮಗಾರಿ.!

ಹಾನಗಲ್ : ಬೇಸಿಗೆ ಪ್ರಭಾವ ತೀವ್ರವಾದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವವೂ ಹೆಚ್ಚಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಮೂರುವರೆ ವರ್ಷ ಪೂರೈಸಿದ ಬಳಿಕವೂ ಪೂರ್ಣಗೊಳ್ಳದಿರುವುದು, ಕ್ಯಾಸನೂರು

ಗ್ರಾಮದ ಜನರ ನಿರೀಕ್ಷೆ ಹುಸಿಗೊಳಿಸಿದಂತಾಗಿದೆ.

ಹೌದು ಹಾನಗಲ್ ತಾಲೂಕಿನ ಚಿಕ್ಕೌಂಶಿ-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾಸನೂರು ಗ್ರಾಮದಲ್ಲಿ 2022 ರಲ್ಲಿ  ಜೆಜೆಎಂ ಯೋಜನೆಯಡಿ ಕಾಮಗಾರಿ ಆರಂಭಿಸಿ ಮೂರುವರೆ ವರ್ಷ ಕಳೆದುಹೋಗಿದೆ ಆದರೂ ಕೂಡ ಕಾಮಗಾರಿ ಪೂರ್ಣಗೊಳ್ಳದೆ ಗ್ರಾಮಸ್ಥರು ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ, ಗ್ರಾಮದಲ್ಲಿ 260 ಕ್ಕೂ ಅಧಿಕ ಕುಟುಂಬಗಳಿವೆ, ನಿರಂತರ ನೀರು ಪೂರೈಸಲು ಜೆಜೆಎಂ ಯೋಜನೆಯಡಿ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಮಗಾರಿಗಾಗಿ

ಎಲ್ಲೆಂದರಲ್ಲಿ ರಸ್ತೆ ಅಗೆದು, ಗುಂಡಿ ಮಾಡಲಾಗಿದೆ.

ಮಾಡಿರುವ ಕೆಲಸವೂ ಕಳಪೆ ಗುಣಮಟ್ಟದ್ದಾಗಿದೆ. ಮುಖ್ಯ ಪೈಪ್ ಜೋಡಣೆ ಕಾಲರ್ ಕಳಪೆ ಗುಣಮಟ್ಟದ್ದಾಗಿದ್ದು ನೀರು ಪೋಲಾಗುತ್ತಿದೆ.

ಇನ್ನೂ ಸುಸ್ಥಿತಿಯಲ್ಲಿರುವ ಸಿಸಿ ರಸ್ತೆ ಅಗೆದು, ಹಾಳು ಮಾಡಲಾಗಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ ನಿರ್ಮಾಣವೂ ಕಳಪೆಯಾಗಿದೆ, ಗುತ್ತಿಗೆದಾರನ ಮನಸ್ಸೋ ಇಚ್ಚೆ ಹಾಗೂ ಬೇಜವಾಬ್ದಾರಿ ಕಾಮಗಾರಿಗೆ  ಗ್ರಾಮಸ್ಥರು ಬೇಸತ್ತ ಹೋಗಿದ್ದಾರೆ,

ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಂದಿಗೂ ಬಗೆಹರಿದಿಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಹಿಂದೆಟು ಹಾಕುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನೂ ಇಲಾಖೆಯ ಮಾರ್ಗ

ಸೂಚಿಯಂತೆ ಕಾಮಗಾರಿ ನಡೆದಿಲ್ಲ, ಇನ್ನಾದರೂ ಅಧಿಕಾರಿಗಳು ಜಲ ಜೀವನ ಮಿಷನ್ ಗುತ್ತಿಗೆದಾರರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಮುಂದಿನ ದಿನಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ  ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

'ಲೋಕೇಶ್ ಸುಣಗಾರ್ ಪಬ್ಲಿಕ್ ನೆಕ್ಸ್ಟ್ ಹಾನಗಲ್

Edited By :
PublicNext

PublicNext

30/04/2026 06:36 pm

Cinque Terre

10.55 K

Cinque Terre

0

ಸಂಬಂಧಿತ ಸುದ್ದಿ