ಚಿತ್ರದುರ್ಗ: ತೀವ್ರ ಬಿಸಿಲಿನ ತಾಪಕ್ಕೆ ಮತ್ತೊಂದು ಜೀವ ಬಲಿಯಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಜಗಳೂರು ಮೂಲದ ಐಎಂ ಫಯಾಜ್ (45) ಉರುಸ್ ಕಾರ್ಯಕ್ರಮದಿಂದ ವಾಪಸ್ಸಾಗುತ್ತಿದ್ದ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಜಗಳೂರಿನ ನಿವೃತ್ತ ಶಿಕ್ಷಕ ಇಬ್ರಾಹಿಂ ಸಾಬ್ ಅವರ ಪುತ್ರರಾಗಿರುವ ಫಯಾಜ್, ಕುಟುಂಬದವರೊಂದಿಗೆ ಕರ್ನೂಲ್ ಜಿಲ್ಲೆಯ ಅದೋನಿಯ ಗುಡಿಕಲ್ ದರ್ಗಾದ ಉರುಸ್‌ಗೆ ತೆರಳಿದ್ದರುಧಾರ್ಮಿಕ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವ ವೇಳೆ ತೀವ್ರ ಬಿಸಿಲಿನ ತಾಪಕ್ಕೆ ಅವರು ಅಸ್ವಸ್ಥಗೊಂಡಿದ್ದಾರೆ. ಕ್ಷಣಾರ್ಧದಲ್ಲೇ ಕುಸಿದುಬಿದ್ದ ಫಯಾಜ್ ಅವರನ್ನು ರಕ್ಷಿಸಲು ಸಾಧ್ಯವಾಗದೆ ಜೀವ ಕಳೆದುಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕ ಹಾಗೂ ಆಂಧ್ರಪ್ರದೇಶ ಭಾಗಗಳಲ್ಲಿ ತೀವ್ರ ಬಿಸಿಲಿನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಘಟನೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ನೀಡಿದೆ.
PublicNext
04/05/2026 10:45 am
LOADING...