ಚಳ್ಳಕೆರೆ: ನಗರದ ಸಂಪಿಗೆ ರಸ್ತೆಯ ನಿವಾಸಿಯಾಗಿರುವ ಸೈಯದ್ ಅಹ್ಮದ್, ಸಿಸಿ ಕ್ಯಾಮೆರಾ ಅಳವಡಿಕೆ, ಕಂಪ್ಯೂಟರ್ ಮಾರಾಟ ಹಾಗೂ ರಿಪೇರಿ ವ್ಯವಹಾರದ ಜೊತೆಗೆ ಮೀನು ಹಿಡಿಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ತಾಲೂಕಿನ ರಾಣಿಕೆರೆ, ವೇದಾವತಿ ನದಿಯ ಬ್ಯಾರೇಜ್ ಸೇರಿದಂತೆ ವಿವಿಧ ಕೆರೆಗಳಲ್ಲಿ ಮೀನು ಹಿಡಿಯುವ ಇವರು, ಇತ್ತೀಚೆಗೆ ಜಗಳೂರಜ್ಜ ದೇವಸ್ಥಾನದ ಹಿಂಭಾಗದ ಕೆರೆಯಲ್ಲಿ ಗಾಳ ಹಾಕಿ ಅಚ್ಚರಿ ಮೂಡಿಸುವ ಮೀನೊಂದನ್ನು ಹಿಡಿದಿದ್ದಾರೆ.
ಅದರಂತೆ, ಸೈಯದ್ ಅಹ್ಮದ್ ಹಾಕಿದ ಗಾಳಕ್ಕೆ ಸುಮಾರು 4 ಕೆ.ಜಿ. ತೂಕದ ಗೌರಿ ಮೀನು ಸಿಕ್ಕಿರುವುದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಸಮುದ್ರ ಅಥವಾ ದೊಡ್ಡ ಕೆರೆಗಳಲ್ಲಿ ಕಾಣಸಿಗುವ ಈ ಗೌರಿ ಮೀನು ಇಷ್ಟು ಸಣ್ಣ ಕೆರೆಯಲ್ಲಿ ಸಿಕ್ಕಿರುವುದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ. ಕೆಲವೊಮ್ಮೆ ಇಡೀ ದಿನ ಕಾದು ಕುಳಿತರೂ ಒಂದು ಮೀನು ಸಹ ಸಿಗದಿರಬಹುದು, ಆದರೆ ಈ ಬಾರಿ ಸಿಕ್ಕಿರುವ ಮೀನು ರೋಮಾಂಚಕ ಅನುಭವ ನೀಡಿದೆ ಎಂದು ಸೈಯದ್ ಅಹ್ಮದ್ ಹೇಳಿದ್ದಾರೆ.
ಇದೇ ವೇಳೆ, ಇಂದು ಅಜ್ಜನ ಗುಡಿ ಕೆರೆಯಲ್ಲಿ ಹಾಕಿದ್ದ ಗಾಳಕ್ಕೆ 4 ಕೆ.ಜಿ ತೂಕದ 1 ಗೌರಿ ಮೀನು, 2 ಕೆ.ಜಿ ತೂಕದ 2 ರೋಹು ಮೀನು ಹಾಗೂ ಜುಲೆಬಿ ಮೀನುಗಳು ಸೇರಿ ಒಟ್ಟು 8 ಕೆ.ಜಿ. ತೂಕದ ಮೀನುಗಳನ್ನು ಬೇಟೆಯಾಡಿದ್ದೇನೆ ಎಂದು ಸೈಯದ್ ಅಹ್ಮದ್ ಹರ್ಷ ವ್ಯಕ್ತಪಡಿಸಿದ್ದಾರೆ.
PublicNext
26/04/2026 03:16 pm
LOADING...