ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿಮ್ಮಣ್ಣ ನಾಯಕನ ಕೆರೆ ಖಾಲಿ : ಮೀನುಗಳ ಮಾರಣಹೋಮ

ಚಿತ್ರದುರ್ಗ: ಹೀಗೆ ನೀರಿಲ್ಲದೇ ಬತ್ತಿ ಹೋಗಿರೋ ಐತಿಹಾಸಿಕ ಕೆರೆ ಕೆರೆಯಂಚಿನ ನೀರಿನಲ್ಲಿ ಸತ್ತು ತೇಲಾಡುತ್ತಿರುವ ರಾಶಿ ರಾಶಿ ಮೀನುಗಳು ಇನ್ನೊಂದೆಡೆ ನೀರಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರೋ ಜಲಚರ ಜೀವಿಗಳು ಈ ದೃಶ್ಯ ಮನ ಮಿಡಿಯುವ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗದ ಐತಿಹಾಸಿಕ ತಿಮ್ಮಣ್ಣನಾಯಕನ ಕೆರೆಯಲ್ಲಿ.

ಹೌದು ಚಿತ್ರದುರ್ಗ ನಗರದ ಹೊರ ಭಾಗದಲ್ಲಿರುವ ತಿಮ್ಮಣ್ಣ ನಾಯಕನ ಕೆರೆ ನಗರ ಪ್ರದೇಶದ ಜನರಿಗೆ ಈ ಕೆರೆ ಜಲಪಾತ್ರೆಯಾಗಿದೆ. ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಿಂದ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಆದ್ರೆ ಈ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆ ಸಂಪೂರ್ಣ ಖಾಲಿಯಾಗಿದೆ. ಇದು ಜನ ಜಾನುವಾರುಗಳಿಗೆ ಮಾತ್ರವಲ್ಲದೆ, ಜಲಚರ ವಾಸಿಗಳಿಗೂ ಸಂಕಷ್ಟ ತಂದೊಡ್ಡಿದೆ.

ಇನ್ನೂ ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲಿನ ತಾಪಮಾನ ಹೆಚ್ಚಳವಾಗಿದ್ದು, ಇದರಿಂದ ಕೆರೆಯ ನೀರು ಸಂಪೂರ್ಣ ಖಾಲಿಯಾಗಿದೆ. ಇದು ಕೆರೆಯಲ್ಲಿದ್ದ ಮೀನುಗಳ ಜೀವಕ್ಕೆ ಕಂಟಕವಾಗಿದೆ. ನೀರಿಲ್ಲದೇ ಜಲಪಾತ್ರೆ ಸಂಪೂರ್ಣ ಖಾಲಿ ಆಗಿದ್ದು ರಾಶಿ ರಾಶಿ ಮೀನುಗಳು ಸಾಯುತ್ತಿವೆ.

ಕೆರೆಯ ಅಂಚಿನಲ್ಲಿ ಭಾರಿ ಪ್ರಮಾಣದ ಮೀನುಗಳು ಸತ್ತು ತೇಲುತ್ತಿದ್ದು, ಕೆರೆ ದುರ್ನಾತ ಹೊಡೆಯುತ್ತಿದೆ. ಇನ್ನೂ ಇದ್ದ ಸ್ವಲ್ಪ ನೀರಿನಲ್ಲೇ ಜೀವ ಉಳಿಸಿಕೊಳ್ಳಲು ಕೆಲ ಮೀನುಗಳು ವಿಲ ವಿಲ ಒದ್ದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಸಾವು ಬದುಕಿನ ನಡುವೆ ಮೀನುಗಳು ಪ್ರಾಣ ರಕ್ಷಣೆಗೆ ಒದ್ದಾಡುತ್ತಿರುವ ದೃಶ್ಯ ಎಂಥವರಿಗೂ ಮನ ಕಲಕುವಂತಾಗಿದೆ.

ಇನ್ನೂ ಬೇಸಿಗೆಯ ತಾಪಮಾನ ಏರಿಕೆ ಆಗುತ್ತಿದ್ದು, ಕೆರೆ ನೀರು ಕೂಡಾ ಆವಿಯಾಗುತ್ತಿದೆ. ಇದರಿಂದ ಕೆರೆಯಲ್ಲಿನ ಮೀನುಗಳಿಗೆ ಆಮ್ಲಜನಕದ ಸಮಸ್ಯೆ ಎದುರಾಗುತ್ತದೆ. ಇದರಿಂದ ಆಕ್ಸಿಜನ್ ಕೊರತೆ ಉಂಟಾಗಿ ರಾಶಿ ರಾಶಿ ಮೀನುಗಳು ಸಾಯುತ್ತಿದ್ದು, ಮೀನುಗಳ ಸಂರಕ್ಷಣೆಗೂ ಕೂಡಾ ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನೂ ಈ ಕುರಿತು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತುಳಸಿದಾಸ್ ಮಾತನಾಡಿ ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಜೀವಂತ ಮೀನುಗಳ ರಕ್ಷಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆ ಬೇಸಿಗೆ ಬಿಸಿಲಿನ ಎಫೆಕ್ಟ್ ಜಲಚರ ಜೀವಿಗೂ ತಟ್ಟಿದೆ. ಬರದ ನಾಡಲ್ಲಿ ನೀರಿಲ್ಲದೇ ಕೆರೆಗಳು ಖಾಲಿಯಾಗುತ್ತಿದ್ದು, ರಾಶಿ ರಾಶಿ ಮೀನುಗಳ ಮಾರಣಹೋಮ ಆಗುತ್ತಿದೆ‌. ಇನ್ನಾದ್ರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನರಳುತ್ತಿರುವ ಮೀನುಗಳ ರಕ್ಷಣೆ ಮಾಡಲಿ ಅನ್ನೋದು ನಮ್ಮ ಆಶಯ.

Edited By :
PublicNext

PublicNext

18/04/2026 10:27 am

Cinque Terre

10.32 K

Cinque Terre

0

ಸಂಬಂಧಿತ ಸುದ್ದಿ