ಧಾರವಾಡ : ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೂತನ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ ಬಾಗಲ ಅವರನ್ನು ಆಯ್ಕೆ ಮಾಡಲಾಗಿದೆ.ಈ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ಬಸವರಾಜ ಬಾಗಲ ಅವರು ಸರ್ಕಾರಿ ನೌಕರರಲ್ಲಿರುವ ವಿವಿಧ ಕಲೆ, ಸಾಹಿತ್ಯದ ಅನಾವರಣ, ಉದ್ಯೋಗದ ಒತ್ತಡದಿಂದ ನೌಕರರನ್ನು ಹೊರತರುವುದು, ಭಾರತ ದೇಶದ ಇತಿಹಾಸ, ಪರಂಪರೆ, ಕಲೆಗಳನ್ನು ಉಳಿಸಿ ಬೆಳೆಸುವುದು, ಕನ್ನಡ ಜಾಗೃತಿ ಅಭಿಯಾನ ಆರಂಭಿಸುವುದು.
ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ನೌಕರರ ಬರಹಗಳನ್ನು ಒಟ್ಟುಗೂಡಿಸಿ ಪತ್ರಿಕೆ, ಸಾಹಿತ್ಯಕ ಪುರವಣಿಗಳನ್ನು ಹೊರತರುವುದು ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಸವರಾಜ ಬಾಗಲ ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ (ರಿ) ಬೆಂಗಳೂರು ಧಾರವಾಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯನ್ನು ಸಂಸ್ಥಾಪಕರ ರಾಜ್ಯಾಧ್ಯಕ್ಷರಾದ ಶ್ರೀಮತಿ ರಮಾ.ಆರ್, ಸಂಸ್ಥಾಪಕ ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ, ಮಹಾ ಪೋಷಕರಾದ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಸಂಸ್ಥಾಪಕ ಮಹಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಪರ್ವಿನಭಾನು ಬುಳ್ಳನ್ನವರು ಆಯ್ಕೆ ಮಾಡಿದ್ದಾರೆ.ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಧಾರವಾಡ
Kshetra Samachara
04/05/2026 11:39 am
LOADING...