ಸಾಮಾಜಿಕ ಜಾಲತಾಣದಲ್ಲಿ 'ಪೋಸ್ಟ್ ಕಾರ್ಡ್ ಕನ್ನಡ' ಹಂಚಿಕೊಂಡಿರುವ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪೋಸ್ಟ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಫೋಟೋಗಳನ್ನು ಬಳಸಲಾಗಿದೆ.
"ಸನಾತನ ಧರ್ಮವನ್ನು ಅವಹೇಳನ ಮಾಡಿದ ಎಲ್ಲಾ ನಾಲಾಯಕ್‌ಗಳಿಗೂ ಸೋಲು"
'ಮಮತಾ ಬ್ಯಾನರ್ಜಿ, ಸ್ಟಾಲಿನ್, ಪಿಣರಾಯಿ ವಿಜಯನ್... ಎಲ್ಲಾ ಹಿಂದೂ ವಿರೋಧಿಗಳಿಗೂ ದಿಟ್ಟ ಉತ್ತರ ಕೊಟ್ಟ ಚುನಾವಣಾ ಫಲಿತಾಂಶ ಇದು' ಎಂದು ಬರೆಯಲಾಗಿದೆ.
ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ಮುಂದಿಟ್ಟುಕೊಂಡು ಈ ಮೂವರು ನಾಯಕರ ವಿರುದ್ಧ ಪೋಸ್ಟ್‌ನಲ್ಲಿ ಟೀಕೆ ಮಾಡಲಾಗಿದೆ. ಸನಾತನ ಧರ್ಮದ ವಿಚಾರದಲ್ಲಿ ಈ ನಾಯಕರು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಗುರಿಯಾಗಿಸಿ ಈ ಪೋಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಹುಟ್ಟುಹಾಕಿದ್ದು, ಸಾವಿರಾರು ಶೇರ್ ಮತ್ತು ಕಮೆಂಟ್‌ಗಳನ್ನು ಪಡೆದುಕೊಂಡಿದೆ.
PublicNext
04/05/2026 04:23 pm
LOADING...