ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ರಾಜಕೀಯ ಯಶಸ್ಸಿಗೆ ವಿಜಯ್ ತಾಯಿ ಭಾವುಕ: 'ಅತ್ಯಂತ ಸಂತೋಷವಾಗಿದೆ' ಎಂದ ಶೋಭಾ

ಚೆನ್ನೈ; ಸ್ಟಾರ್ ದಳಪತಿ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ತನ್ನ ಮೊದಲ ಚುನಾವಣೆಯಲ್ಲೇ ಅಬ್ಬರದ ಎಂಟ್ರಿ ನೀಡಿದೆ. ಒಟ್ಟು 234 ಕ್ಷೇತ್ರಗಳ ಪೈಕಿ 109 ಕ್ಷೇತ್ರಗಳಲ್ಲಿ TVK ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ವಿಜಯ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಮಗನ ಈ ಅಭೂತಪೂರ್ವ ಯಶಸ್ಸಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ತಾಯಿ ಶೋಭಾ ಚಂದ್ರಶೇಖರ್, "ನನಗೆ ತುಂಬಾ ಅತೀವ ಸಂತೋಷವಾಗುತ್ತಿದೆ" ಎಂದು ಭಾವುಕರಾಗಿ ನುಡಿದರು. ರಾಜಕೀಯ ಪ್ರವೇಶದ ನಂತರ ಮಗನಿಗೆ ಜನಬೆಂಬಲ ಸಿಗುತ್ತಿರುವುದನ್ನು ಕಂಡು ಅವರು ಧನ್ಯತಾಭಾವ ವ್ಯಕ್ತಪಡಿಸಿದರು. ಇದೇ ವೇಳೆ ಸಂತಸ ಹಂಚಿಕೊಂಡ ವಿಜಯ್ ತಂದೆ ಹಾಗೂ ಖ್ಯಾತ ನಿರ್ದೇಶಕ ಎಸ್‌.ಎ. ಚಂದ್ರಶೇಖರ್, "ಶೋಭಾ ಕೇವಲ ವಿಜಯ್ ತಾಯಿಯಷ್ಟೇ ಅಲ್ಲ, ಆಕೆ ವಿಜಯ್‌ ಅವರ ಮೊದಲ ಅಭಿಮಾನಿ. ಆಕೆಗೆ ಇಂದು ಮಗನ ಸಾಧನೆ ಕಂಡು ಹೆಮ್ಮೆಯಾಗುತ್ತಿದೆ," ಎಂದು ಪತ್ನಿಯ ಸಂತೋಷವನ್ನು ವಿವರಿಸಿದರು.

Edited By : Nirmala Aralikatti
PublicNext

PublicNext

04/05/2026 04:36 pm

Cinque Terre

9.6 K

Cinque Terre

0