ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಹಾಗೂ ಹಳೆಯ ಏರಿಯಾಗಳಲ್ಲಿ ಒಂದಾದ ಮಲ್ಲೇಶ್ವರಂನಲ್ಲಿ ಇಂದಿನ ವಾಸ್ತವ ಸ್ಥಿತಿ ಹೇಗಿದೆ? ಇಲ್ಲಿನ ನಾಗರಿಕರು ನೆಮ್ಮದಿಯಿಂದ ಇದ್ದಾರಾ? ಈ ಕುರಿತು ಪಬ್ಲಿಕ್ ನೆಕ್ಸ್ಟ್ ತಂಡ ಇಂದು ನೇರ ಸಮೀಕ್ಷೆ ನಡೆಸಿದೆ.
ಮಲ್ಲೇಶ್ವರಂನ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿದ ನಮ್ಮ ತಂಡ, ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ ಅವರ ದೈನಂದಿನ ಸಂಕಷ್ಟಗಳನ್ನು ಆಲಿಸಿತು. ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳು ಮುನ್ನೆಲೆಗೆ ಬಂದಿವೆ .ಗುಂಡಿ ಬಿದ್ದ ರಸ್ತೆಗಳು ಹಾಗೂ ಫುಟ್‌ಪಾತ್‌ಗಳ ಅತಿಕ್ರಮಣದ ಬಗ್ಗೆ ಜನರಲ್ಲಿ ಆಕ್ರೋಶವಿದೆಯೇ? ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಒಳಚರಂಡಿ ವ್ಯವಸ್ಥೆಯ ಹಳೆಯ ಸಮಸ್ಯೆಗಳು ಬಗೆಹರಿದಿವೆಯೇ?ಬಿಬಿಎಂಪಿ ಕಸದ ಗಾಡಿಗಳು ನಿಗದಿತ ಸಮಯಕ್ಕೆ ಬರುತ್ತಿವೆಯೇ ಅಥವಾ ರಸ್ತೆ ಬದಿಯೇ ಕಸದ ರಾಶಿ ಬೀಳುತ್ತಿದೆಯೇ?
ರಾತ್ರಿ ವೇಳೆ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸಂಚಾರಕ್ಕೆ ಪೂರಕವಾಗಿ ಬೀದಿ ದೀಪಗಳ ಸ್ಥಿತಿ ಹೇಗಿದೆ?ಬಗೆಹರಿಯದ ಸಮಸ್ಯೆಗಳ ಬಗ್ಗೆ ಜನರ ಆಕ್ರೋಶ. ಮಲ್ಲೇಶ್ವರಂ ವಾರ್ಡ್‌ನ ಹಿರಿಯ ನಿವಾಸಿಗಳು ತಮ್ಮ ದಶಕಗಳ ಅನುಭವವನ್ನು ಹಂಚಿಕೊಂಡಿದ್ದು, "ಹೆಸರಿಗೆ ಮಾತ್ರ ಹೈಟೆಕ್ ವಾರ್ಡ್, ಆದರೆ ಒಳ ಹೋದರೆ ಸಮಸ್ಯೆಗಳ ಸಾಗರವೇ ಇದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆಡಳಿತ ಮಂಡಳಿಯಿಂದ ಜನರು ನಿರೀಕ್ಷಿಸುತ್ತಿರುವ ಬದಲಾವಣೆಗಳೇನು ಎಂಬುದು ನಮ್ಮ ಈ ಸಮೀಕ್ಷೆಯ ಮುಖ್ಯ ಉದ್ದೇಶ.ನಿಮ್ಮ ವಾರ್ಡ್‌ನ ಸಮಸ್ಯೆಗಳನ್ನು ಹೊರಹಾಕಲು ನಾವಿದ್ದೇವೆ ನಿಮ್ಮ ಜೊತೆ. ಮಲ್ಲೇಶ್ವರಂನ ನೈಜ ಚಿತ್ರಣವನ್ನು ಜನರ ಧ್ವನಿಯ ಮೂಲಕವೇ ನಿಮ್ಮ ಮುಂದೆ ತರುತ್ತಿದ್ದೇವೆ.
PublicNext
05/05/2026 06:58 pm
LOADING...