ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕೀಯಕ್ಕೆ ತುಪ್ಪದ ಬೆಡಗಿ ಎಂಟ್ರಿ..! ವಿಜಯ್ ಬಗ್ಗೆ ರಾಗಿಣಿ ಹೇಳಿದ್ದೇನು ?

ಬೆಂಗಳೂರು : ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಒಂದು ದೊಡ್ಡ ಸುದ್ದಿ ಆಕ್ಷನ್ ಕ್ವೀನ್ ರಾಗಿಣಿ ದ್ವಿವೇದಿ ಮತ್ತೊಮ್ಮೆ ಭರ್ಜರಿ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ .ಎಸ್‌ಪಿಆರ್ ಪ್ರೊಡಕ್ಷನ್ಸ್ ಅಡಿಯಲ್ಲಿ, ನಿರ್ದೇಶಕ ಸಂಜಯ್ ಬಿ.ಎಸ್ ಅವರ ಕನಸಿನ ಪ್ರಾಜೆಕ್ಟ್ ‘ಮದನಿಕ’ ಈಗಾಗಲೇ ತನ್ನ ಟೀಸರ್ ಮತ್ತು ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹವಾ ಸೃಷ್ಟಿಸಿದೆ.

ಈ ಬಾರಿ ರಾಗಿಣಿ ಅವರು ಸಂಪೂರ್ಣ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಗಡ್ ಸ್ಟೈಲ್, ಮಾಸ್ ಅವತಾರ ಅಭಿಮಾನಿಗಳಿಗೆ ಇದು ಸಖತ್ ಟ್ರೀಟ್ ಟೀಸರ್ ನೋಡಿದ್ರೆ, ಇದು ಸಾಮಾನ್ಯ ಸಿನಿಮಾ ಅಲ್ಲ ಅನ್ನೋದು ಸ್ಪಷ್ಟ. ಸಸ್ಪೆನ್ಸ್, ಥ್ರಿಲ್ಲರ್ ಎಲೆಮೆಂಟ್ಸ್ ಜೊತೆ ಕಥೆಯನ್ನು ನಿರ್ದೇಶಕ ಸಂಜಯ್ ಬಿ.ಎಸ್ ಬಹಳ ಇಂಟರೆಸ್ಟಿಂಗ್ ಆಗಿ ಕಟ್ಟಿಕೊಟ್ಟಿದ್ದಾರೆ.

ಇನ್ನು ಬಿಡುಗಡೆ ಆಗಿರುವ ಹಾಡು ಕೂಡ ಈಗಾಗಲೇ ಹಿಟ್ ಲಿಸ್ಟ್ ಸೇರಿದೆ. ಮ್ಯೂಸಿಕ್, ಮೇಕಿಂಗ್, ಎಲ್ಲವೂ ಸೇರಿ ಸಿನಿಮಾ ಮೇಲೆ ಎಕ್ಸ್‌ಪೆಕ್ಟೇಶನ್ ಹೆಚ್ಚಿಸಿದೆ.

ಒಟ್ಟಿನಲ್ಲಿ ‘ಮದನಿಕ’ ಕೇವಲ ಆಕ್ಷನ್ ಸಿನಿಮಾ ಅಲ್ಲ, ಗಟ್ಟಿಯಾದ ಕಥಾಹಂದರ ಹೊಂದಿರುವ ಪವರ್‌ಫುಲ್ ಪ್ಯಾಕೇಜ್ ಅನ್ನೋದು ಗೊತ್ತಾಗುತ್ತಿದೆ.ಸದ್ಯದಲ್ಲೇ ‘ಮದನಿಕ’ ಬೆಳ್ಳಿಪರದೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರೆಡಿ ಆಗಿ… ಆಕ್ಷನ್ ಹಂಗಾಮಾ ಶುರುವಾಗ್ತಿದೆ.

Edited By : Somashekar
PublicNext

PublicNext

06/05/2026 01:28 pm

Cinque Terre

4.31 K

Cinque Terre

0