ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾಗ್ಯ ಕೊಡ್ಲಿಕ್ಕೆ ಹಣವಿದೆ, ಚುನಾವಣೆ ಮಾಡೋಕೆ ಹಣ ಇಲ್ವಾ?

ಬೆಂಗಳೂರು: ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಹಾಗೂ ಹಳೆಯ ಏರಿಯಾಗಳಲ್ಲಿ ಒಂದಾದ ಮಲ್ಲೇಶ್ವರಂನಲ್ಲಿ ಇಂದಿನ ವಾಸ್ತವ ಸ್ಥಿತಿ ಹೇಗಿದೆ? ಇಲ್ಲಿನ ನಾಗರಿಕರು ನೆಮ್ಮದಿಯಿಂದ ಇದ್ದಾರಾ? ಈ ಕುರಿತು ಪಬ್ಲಿಕ್ ನೆಕ್ಸ್ಟ್ ತಂಡ ಇಂದು ನೇರ ಸಮೀಕ್ಷೆ ನಡೆಸಿದೆ.

ಮಲ್ಲೇಶ್ವರಂನ ಗಲ್ಲಿ- ಗಲ್ಲಿಗಳಲ್ಲಿ ಸಂಚರಿಸಿದ ನಮ್ಮ ತಂಡ, ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ ಅವರ ದೈನಂದಿನ ಸಂಕಷ್ಟಗಳನ್ನು ಆಲಿಸಿತು. ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ಅಂಶಗಳು ಮುನ್ನೆಲೆಗೆ ಬಂದಿವೆ.

ಗುಂಡಿ ಬಿದ್ದ ರಸ್ತೆಗಳು ಹಾಗೂ ಫುಟ್‌ಪಾತ್‌ಗಳ ಅತಿಕ್ರಮಣದ ಬಗ್ಗೆ ಜನರಲ್ಲಿ ಆಕ್ರೋಶವಿದೆಯೇ?

ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಒಳಚರಂಡಿ ವ್ಯವಸ್ಥೆಯ ಹಳೆಯ ಸಮಸ್ಯೆಗಳು ಬಗೆಹರಿದಿವೆಯೇ?ಬಿಬಿಎಂಪಿ ಕಸದ ಗಾಡಿಗಳು ನಿಗದಿತ ಸಮಯಕ್ಕೆ ಬರುತ್ತಿವೆಯೇ ಅಥವಾ ರಸ್ತೆ ಬದಿಯೇ ಕಸದ ರಾಶಿ ಬೀಳುತ್ತಿದೆಯೇ? ಭಾಗ್ಯ ಕೊಡ್ಲಿಕ್ಕೆ ಹಣ ಇದೆ… ಚುನಾವಣೆ ಮಾಡೋಕೆ ಹಣ ಇಲ್ವಾ? ಅನ್ನೋ ಪ್ರಶ್ನೆಯನ್ನು ಮಲ್ಲೇಶ್ವರಂ ಜನ ಕೇಳ್ತಾ ಇದ್ದಾರೆ.

Edited By :
PublicNext

PublicNext

05/05/2026 07:19 pm

Cinque Terre

10.61 K

Cinque Terre

1