ಬೆಂಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಮುಗಿದರೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿಯವರ ನಡುವಿನ ರಾಜಕೀಯ ಗುದ್ದಾಟ ಮಾತ್ರ ಮುಗಿದಂತಿಲ್ಲ.
ಅಂಚೆ ಮತಗಳ ಮರು ಎಣಿಕೆಯಲ್ಲಿ ಡಿ.ಎನ್.ಜೀವರಾಜ್ ಅವರು ಶೃಂಗೇರಿ ಶಾಸಕರಾಗಿ ಹೊರಹೊಮ್ಮಿದ್ದು, ಇದೀಗ ಶಾಸಕರಾಗಿ ಪ್ರಮಾಣ ವಚನ ಪಡೆಯಬೇಕಿದೆ. ಆದರೆ, ಸ್ಪೀಕರ್ ಅವರು ಪ್ರಮಾಣ ಬೋಧನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಇಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಶಾಸಕ ಜೀವರಾಜ್ ಅವರೊಂದಿಗೆ ರಾಜಭವನಕ್ಕೆ ತೆರಳಿ ಕಾಂಗ್ರೆಸ್ ಸರ್ಕಾರದ ಈ ನಡೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಬಳಿಕ ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಆರ್.ಅಶೋಕ್ ಅವರು, ಸ್ಪೀಕರ್ ಅವರು ಪಕ್ಷಪಾತಿಯಾಗಿ ನಡೆದುಕೊಳ್ಳಬಾರದು. ಶಾಸಕರಾಗಿ ನರು ಆಯ್ಕೆಯಾದ ಬಿಜೆಪಿಯ ಜೀವರಾಜ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸಬೇಕು. ಇಲ್ಲದೇ ಹೋದರೆ ಸ್ಪೀಕರ್ ಅವರಿಗೆ ಗೌರವ ಇರದು ಎಂದರು.
PublicNext
05/05/2026 08:33 pm
LOADING...