ಬೆಂಗಳೂರು : ಬೆಂಗಳೂರಲ್ಲಿ ಮಳೆ ಹಿನ್ನೆಲೆ ಅನೇಕ ಮರಗಳು ಧರೆಗುರುಳಿವೆ. ಏಪ್ರಿಲ್ 29ರಿಂದ ಇವತ್ತು ಸಂಜೆವರೆಗೂ 516 ಮರಗಳು ಹಾಗೂ 1305 ಮರದ ಕೊಂಬೆಗಳು ಧರೆಗೆ ಉರುಳಿವೆ. ಐದು ನಗರ ಪಾಲಿಕೆಯಲ್ಲೂ ಇಲ್ಲಿಯವರೆಗೂ 507 ಮರಗಳು ಹಾಗೂ 1256 ಕೊಂಬೆಗಳ ತೆರವು ಮಾಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 5 ಮರಗಳ ಇನ್ನೂ ತೆರವು ಮಾಡಬೇಕಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಮರಗಳು ಹಾಗೂ 23 ಕೊಂಬೆಗಳ ತೆರವು ಮಾಡಬೇಕಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಮರ ತೆರವು ಬಾಕಿ ಇದ್ದು, 8 ಮರದ ಕೊಂಬೆ ತೆರವು ಮಾಡಲು ಬಾಕಿ ಇದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಕೊಂಬೆಗಳ ತೆರವು ಕಾರ್ಯ ಬಾಕಿ ಇದೆ.
PublicNext
05/05/2026 11:05 pm
LOADING...