ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯಾದ್ಯಂತ ಆರೋಗ್ಯ ಇಲಾಖೆ ಕಟ್ಟಡಗಳ ಪರಿಶೀಲನೆಗೆ ಸರ್ಕಾರದ ಆದೇಶ

ಬೆಂಗಳೂರು: ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಕಟ್ಟಡ ಕುಸಿತ ದುರ್ಘಟನೆಯಿಂದ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಆಸ್ಪತ್ರೆ, ಆರೋಗ್ಯ ಕಚೇರಿಯ ಕಟ್ಟಡದ ಪರಿಶೀಲನೆಗೆ ಇಲಾಖೆ ಮುಂದಾಗಿದೆ.

ಅಕಾಲಿಕ‌ ಮಳೆ ಹಾಗೂ ಗಾಳಿಯಿಂದಾಗಿ ಶಿಥಿಲಗೊಂಡಿರುವ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಹಿನ್ನೆಲೆ ಎಚ್ಚೆತ್ತಿರುವ ಇಲಾಖೆ DHO, THO, ತಾಲೂಕು‌ ನೋಡಲ್ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ವ್ಯಾಪ್ತಿಯ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಪಿಎಚ್‌ಸಿ,ಸಿಎಚ್‌ಸಿ ಸೆಂಟರ್‌ನ ಕಟ್ಟಡಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆಗೆ ಸೂಚಿಸಿದ್ದು 15 ದಿನದೊಳಗೆ ಪರಿಶೀಲನೆ ನಡೆಸಿರುವ ಕುರಿತು ಇಂಜಿನಿಯರಿಂಗ್ ವಿಭಾಗಕ್ಕೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

ಪರಿಶೀಲನೆ ವೇಳೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಕಂಡುಬಂದಲ್ಲಿ ಅಲ್ಲಿರುವ ರೋಗಿಗಳನ್ನ ಮತ್ತು ಸಿಬ್ಬಂದಿಗಳನ್ನ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ.

ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನ ತ್ವರಿತವಾಗಿ ದುರಸ್ತಿಗೆ ಸೂಚನೆ ನೀಡಿದ್ದು,ಖಾಲಿ ಇರುವ ಶಿಥಿಲ ಕಟ್ಟಡವನ್ನ ಡೆಮಾಲಿಶನ್ ಮಾಡಲು ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆದೇಶಿಸಲಾಗಿದೆ..

Edited By : Abhishek Kamoji
PublicNext

PublicNext

05/05/2026 10:12 pm

Cinque Terre

8.23 K

Cinque Terre

0

ಸಂಬಂಧಿತ ಸುದ್ದಿ