ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ಸಂಪರ್ಕ ಕೊಂಡಿಗಳಲ್ಲಿ ಒಂದಾದ, ಬರೋಬ್ಬರಿ 22 ಜಿಲ್ಲೆಗಳ ವಾಹನ ಸಂಚಾರಕ್ಕೆ ಆಸರೆಯಾಗಿರುವ ಪೀಣ್ಯ ಫ್ಲೈಓವರ್ ಇಂದಿನಿಂದ ಮೂರು ದಿನಗಳ ಕಾಲ ಬಂದ್ ಆಗಿರಲಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೊಂಡಿರುವ ತುರ್ತು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದಿನಿಂದ (ಮೇ 5) ಆರಂಭವಾಗಿರುವ ಈ ಸಂಚಾರ ನಿರ್ಬಂಧವು ಮೇ 8ರ ಬೆಳಿಗ್ಗೆ 11 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಆ ಬಳಿಕವಷ್ಟೇ ಮೇಲ್ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಫ್ಲೈಓವರ್ ಬಂದ್ ಆಗಿರುವುದರಿಂದ ತುಮಕೂರು ರಸ್ತೆಯ ಕೆಳಭಾಗದಲ್ಲಿ (ಸರ್ವಿಸ್ ರಸ್ತೆ) ವಾಹನಗಳ ದಟ್ಟಣೆ ವಿಪರೀತವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಕೆಲಸದ ನಿಮಿತ್ತ ಹೊರಬರುವವರು ಮತ್ತು ದೂರದ ಊರುಗಳಿಗೆ ಪ್ರಯಾಣಿಸುವವರು ಕನಿಷ್ಠ 1 ಗಂಟೆ ಮುಂಚಿತವಾಗಿ ಹೊರಡುವುದು ಅಥವಾ ಪರ್ಯಾಯ ರಸ್ತೆಗಳನ್ನು ಬಳಸುವುದಕ್ಕೆ ಸೂಚಿಸಲಾಗಿದೆ.
PublicNext
05/05/2026 03:47 pm
LOADING...