ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಏಕ ಬಳಕೆ ಪ್ಲಾಸ್ಟಿಕ್ ನಿಷೇದ - ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನ

ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜೂ.1ರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಈಗಾಗಲೇ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿರುವುದರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಈ ಬಗ್ಗೆ ಕಿನ್ನಿಗೋಳಿ ಕೊಸೆಸಂವ್ ಅಮ್ಮನವರ ದೇವಾಲಯದ ಸಾಂ. ತೆರೆಜಾ ವಾರ್ಡ್ ನ ಸದಸ್ಯರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.

ಕಿನ್ನಿಗೋಳಿ ತುಡಮ್ ಪರಿಸರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದ ಬಗ್ಗೆ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವನ್ನು ಮಾಡುವ ಮೂಲಕ ರಸ್ತೆ ಇಕ್ಕೆಲಾಗಳಲ್ಲಿ ಎರಡು ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸವನ್ನು ತೆರವುಗೊಳಿಸಿ, ಸಾರ್ವಜನಿಕರು ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿಲು ಕರೆ ನೀಡಿದರು ಹಾಗೂ ನಮ್ಮ ಬದುಕು ಸಾಗಿಸಲು ನಮ್ಮ ಪರಿಸರ ಸ್ವಚ್ಛತೆ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಿ,ನೈಸರ್ಗಿಕ ಹಾಗೂ ಬಟ್ಟೆ ಚೀಲ ಉಪಯೋಗ ಮಾಡುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಸಾರ್ವಜನಿಕರಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇದ ಬಗ್ಗೆ ಜಾಗೃತಿ ಮೂಡಿಸಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಪ್ರಣೀಕ್ ಸಾಮಾಜಿಕ ಕಾರ್ಯಕರ್ತರಾದ ಸ್ಟ್ಯಾನಿ ಪಿಂಟೋ ತೆರೆಜಾ ವಾರ್ಡ್ ಗುರಿಕಾರರು ಗ್ರೇಟ್ಟಾ ಫೆರ್ನಾಂಡಿಸ್ ಪ್ರತಿನಿಧಿ ಸದಸ್ಯರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

06/05/2026 03:22 pm

Cinque Terre

234

Cinque Terre

0

ಸಂಬಂಧಿತ ಸುದ್ದಿ