ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯಿಂದ ಸೂರತ್ಕಲ್ ಮಂಗಳೂರಿನವರೆಗೆ ಗುರುವಾರ ಸಂಜೆ7ರಿಂದ ಏಕಾಏಕಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ಉಂಟಾಗಿದ್ದು ಪ್ರಯಾಣಿಕರು ಸಂಕಷ್ಟಕ್ಕೀಡಾದರು
ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ,ಹಳೆಯಂಗಡಿ ,ಮುಕ್ಕ ಸುರತ್ಕಲ್, ಬೈಕಂಪಾಡಿ ಪಣಂಬೂರು ಜಂಕ್ಷನ್ ನಲ್ಲಿ ಏಕಾಏಕಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕೆಲ ಕಡೆ ಟ್ರಾಫಿಕ್ ಪೊಲೀಸರ ಕೊರತೆ ಉಂಟಾಗಿದ್ದರಿಂದ ಪ್ರಯಾಣಿಕರು ಹಾಗೂ ಕೆಲ ದ್ವಿಚಕ್ರ ವಾಹನ ಸವಾರರು ಪರದಾಡಬೇಕಾಯಿತು.
ಗುರುವಾರ ಹಲವಾರು ಸಭೆ ಸಮಾರಂಭಗಳ ಹಾಗೂ ಮದುವೆ ಕಾರ್ಯಕ್ರಮಗಳು ಇದ್ದು ಅಲ್ಲದೆ ಮುಂಬೈನಿಂದಲೂ ಮದುವೆ ಕಾರ್ಯಕ್ರಮಗಳಿಗೆ ಹಲವಾರು ಮಂದಿ ಊರಿಗೆ ಆಗಮಿಸಿದ್ದು
ರಾತ್ರಿ ಹೊತ್ತು ಕೂಡ ಮದುವೆ ಪಾರ್ಟಿ ಇದ್ದ ಕಾರಣ ರಾಷ್ಟ್ರೀಯ ಹೆದ್ದಾರಿ ಬದಿಯ ಪೇಟೆಗಳ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಜನಜಂಗುಳಿ ಇದ್ದದ್ದರಿಂದ ಹೆದ್ದಾರಿ ಬಳಿ ರಸ್ತೆ ತಡೆ ಉಂಟಾಯಿತು.
Kshetra Samachara
30/04/2026 10:01 pm
LOADING...