ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಸುಭಾಷಿತ ನಗರದ ರಾಜ ಕಾಲುವೆಗೆ ವ್ಯವಸ್ಥಿತವಾಗಿ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯ ನಾಗರಿಕರ ಆಗ್ರಹ

ಸುರತ್ಕಲ್: ನಗರ ಪಾಲಿಕೆ ವ್ಯಾಪ್ತಿಯ ಸುಭಾಷಿತ ನಗರದ ರಾಜ ಕಾಲುವೆಗೆ ಮುಂಬರುವ ಮಳೆಗಾಲದ ಪೂರ್ವ ಸಿದ್ಧತೆ ಮಾಡಿಕೊಂಡು ವ್ಯವಸ್ಥಿತವಾಗಿ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ. ಸುಭಾಷಿತ ನಗರವು ವಸತಿ ಸಮುಚ್ಛಯ ನಿಬಿಡ ಪ್ರದೇಶವಾಗಿದ್ದು ತಗ್ಗು ಪ್ರದೇಶವಾಗಿ, ಸಮುದ್ರ ಮಟ್ಟದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಪ್ರತೀ ವರ್ಷವೂ ತುಂಬಾ ಸಮಸ್ಯೆಯನ್ನು ಸ್ಥಳೀಯ ನಾಗರಿಕರು ಅನುಭವಿಸುತ್ತಿದ್ದಾರೆ.

ಈ ಪರಿಸರದ ರಾಜ ಕಾಲುವೆಯಲ್ಲಿ ಸರಿಯಾದ ತಡೆಗೋಡೆ ಇಲ್ಲದೆ, ಪ್ರತೀ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಿ ರಾಜಕಾಲುವೆ ಉಕ್ಕಿ ಹರಿದು ಪ್ರವಾಹದ ಪರಿಸ್ಥಿತಿ ಉಂಟಾಗುತ್ತದೆ ಕೃತಕ ನೆರೆ ತಡೆಯಲು ವೈಜ್ಞಾನಿಕವಾಗಿ ನಿರ್ಮಿಸಿದ ತಡೆಗೋಡೆಯ ತುಂಬಾ ಅಗತ್ಯವಿದ್ದು ಈ ಬಗ್ಗೆ ಕಳೆದ 2021 ರಿಂದ ಸ್ಥಳೀಯ ನಾಗರಿಕ ಅಸೋಸಿಯೇಷನ್ ನ ಮುಖಾಂತರ ಸಂಬಂಧ ಪಟ್ಟ ಜನ ಪ್ರತಿನಿಧಿಗಳಿಗೆ ಮತ್ತು ಮನಪಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಕೆಲ ಕಡೆ ಅವೈಜ್ಞಾನಿಕವಾಗಿ ಕೆಲವು ಕಡೆ ತಡೆಗೋಡೆ ನಿರ್ಮಾಣ ಮಾಡಿದ್ದು,ಅದರ ಎತ್ತರ ಕಡಿಮೆ ಇದ್ದ ಕಾರಣ, ತಡೆಗೋಡೆ ಇಲ್ಲದ ಕಡೆ ಮಳೆಗಾಲದಲ್ಲಿ ಉಕ್ಕಿ ಹರಿಯುವ ಪ್ರವಾಹದಿಂದ ಸುಭಾಷಿತ ನಗರದಲ್ಲಿ ಕೃತಕ ನೆರೆ ಉಂಟಾಗುತ್ತಿದ್ದು ನಾಗರಿಕರು ಕಷ್ಟ, ನಷ್ಟಗಳನ್ನು ಅನುಭವಿಸುತ್ತಿದ್ದಾರೆ.

ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ಮಳೆಗಾಲದ ಮೊದಲೇ ಈ ಭಾಗದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಿ ಅನಾಹುತವನ್ನು ತಡೆಗಟ್ಟಬೇಕು ಎಂದು ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್

ಅಧ್ಯಕ್ಷ ರಮೇಶ್ ಶೆಟ್ಟಿ ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

05/05/2026 05:42 pm

Cinque Terre

180

Cinque Terre

0

ಸಂಬಂಧಿತ ಸುದ್ದಿ