ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಬೈಕ್ ಅಪಘಾತ - ಮುಖ್ಯ ಶಿಕ್ಷಕ ಸಾವು

ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಸಮೀಪದ ವಿಠಲಾಪುರ ಬಳಿ ಬುಧವಾರ ಸಂಜೆ ನಡೆದ ಬೈಕ್ ಅಪಘಾತದಲ್ಲಿ ಮುಖ್ಯಶಿಕ್ಷಕರೊಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಇದೇ ತಾಲ್ಲೂಕಿನ ರಾಂಪುರ ಗ್ರಾಮದ ಪ್ರೇಮಕುಮಾರ್ (45) ಎಂದು ಗುರುತಿಸಲಾಗಿದ್ದು, ಇವರು ಬಿ.ಜಿ.ಕೆರೆ ಗ್ರಾಮದ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಗಾಯಾಳುವನ್ನು ಪಕ್ಕುರ್ತಿಯ ರಾಮಾಂಜಿನೇಯ ಎಂದು ಗುರುತಿಸಲಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಕಾರಣ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ದಾಖಲು ಮಾಡಲಾಗಿದೆ.

ಆಂಧ್ರಪ್ರದೇಶದ ರಾಯದುರ್ಗ ಕಡೆಯಿಂದ ರಾಂಪುರಕ್ಕೆ ಬರುವ ರಸ್ತೆಯ ತಿರುವುನಲ್ಲಿ ಕಂದಕಕ್ಕೆ ಬಿದ್ದು ಘಟನೆ ಸಂಭವಿಸಿದೆ.ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

13/05/2026 09:38 pm

Cinque Terre

9.43 K

Cinque Terre

0

ಸಂಬಂಧಿತ ಸುದ್ದಿ