ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟಿ ವೃಕ್ಷ ಅಭಿಯಾನದ ಹೆಸರಲ್ಲಿ ಅಮೃತ್ ಮಹಲ್ ಕಾವಲು ಭೂಮಿಯಲ್ಲಿ ಕಾಂಕ್ರೀಟ್ ಸಾಮ್ರಾಜ್ಯ…!

ಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆಯ ಅಮೃತ್ ಮಹಲ್ ಕಾವಲು ಭೂಮಿಯಲ್ಲಿ ಕೋಟಿ ವೃಕ್ಷ ಅಭಿಯಾನದ ಹೆಸರಿನಲ್ಲಿ ಗುತ್ತಿಗೆ ಪಡೆದ ಪ್ರದೇಶದಲ್ಲಿ ಬೃಹತ್ ಕಾಂಕ್ರೀಟ್ ಕಟ್ಟಡಗಳು ನಿರ್ಮಾಣವಾಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು 1501 ಎಕರೆ ಅಮೃತ್ ಮಹಲ್ ಕಾವಲು ಭೂಮಿಯನ್ನು ಪರಭಾರೆ ಅಥವಾ ಗುತ್ತಿಗೆ ನೀಡಬಾರದು ಎಂಬ ಹೈಕೋರ್ಟ್ ಆದೇಶವಿದ್ದರೂ, 2021ರ ಜೂನ್ 17ರಂದು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಆದೇಶದ ಮೇರೆಗೆ ಸ್ಥಳೀಯ ಟ್ರಸ್ಟ್‌ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೋಟಿ ವೃಕ್ಷ ಅಭಿಯಾನದ ಉದ್ದೇಶ ಅರಣ್ಯ ಹಾಗೂ ಔಷಧೀಯ ಸಸ್ಯಗಳ ಸಂರಕ್ಷಣೆ ಆಗಿದ್ದರೂ, ಈಗ ಅಲ್ಲಲ್ಲಿ ಗೋಶಾಲೆ, ಆಶ್ರಮ, ಧ್ಯಾನ ಮಂದಿರ, ವಸತಿಗೃಹ, ಅಡಿಕೆ ತೋಟ ಹಾಗೂ ಜೀವ ಸಮಾಧಿ ನಿರ್ಮಾಣವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದಲ್ಲದೆ ಅಮೃತ್ ಮಹಲ್ ಕಾವಲಿನಲ್ಲಿ ಸಹಜವಾಗಿ ಬೆಳೆದಿದ್ದ ಕುರುಚಲು ಗಿಡಗಳನ್ನು ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದು, ಪರಿಸರ ಹಾನಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಔಷಧೀಯ ಸಸ್ಯಗಳ ಹೆಸರಿನಲ್ಲಿ ಕಾಂಕ್ರೀಟ್ ಕಟ್ಟಡಗಳಿಗೆ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಹಾಗೂ ಸಚಿವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಗುತ್ತಿಗೆ ಪಡೆದ ಟ್ರಸ್ಟ್ ಷರತ್ತುಗಳನ್ನು ಉಲ್ಲಂಘಿಸಿದ್ದರೂ ಕ್ರಮ ಯಾಕಿಲ್ಲ, ಅಮೃತ್ ಮಹಲ್ ಕಾವಲು ಪ್ರದೇಶವನ್ನು ಯಾರು ರಕ್ಷಿಸಬೇಕು ಎಂಬ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By :
PublicNext

PublicNext

16/05/2026 12:31 pm

Cinque Terre

9.15 K

Cinque Terre

0

ಸಂಬಂಧಿತ ಸುದ್ದಿ