ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಲಗೇಜ್ ಆಟೋಗೆ ಕಾರ್ ಡಿಕ್ಕಿ - ಓರ್ವ ಸಾವು

ಮೊಳಕಾಲ್ಮುರು: ಲಗೇಜ್ ಆಟೋಕ್ಕೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಘಟನೆಯಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ತಾಲ್ಲೂಕಿನ ಬಿ.ಜಿ.ಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 150-ಎ ರಲ್ಲಿ ನಡೆದಿದೆ.

ಮೃತನನ್ನು ಆಟೋ ಚಾಲಕ ಕೂಡ್ಲಿಗಿ ತಾಲ್ಲೂಕಿನ ಐನಹಳ್ಳಿ, ಗ್ರಾಮದ ಎಸ್.ಬಿ. ಏಕಾಂತ (30) ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಮೃತನ ಸಹೋದರ ನಾಗೇಂದ್ರ ಎಂದು ಗುರುತಿಸಲಾಗಿದೆ.

ಚಳ್ಳಕೆರೆ ಕಡೆಗೆ ತರಕಾರಿ ಹಾಕಿಕೊಂಡು ಹೋಗುತ್ತಿದ್ದ ಆಟೋಕ್ಕೆ ಮಂತ್ರಾಲಯದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಹಿಂಬದಿಗೆ ಡಿಕ್ಕಿ ಹೊಡೆದಿದೆ, ರಭಸಕ್ಕೆ ಆಟೋ ಕೆಲ ಮೀಟರ್ ದೂರದಷ್ಟು ಹೋಗಿ ಬಿದ್ದಿದ್ದು ತೀವ್ರತೆಗೆ ಸಾಕ್ಷಿಯಾಗಿತ್ತು.

ಕಾರು ಚಾಲಕ ಬೆಂಗಳೂರಿನ ಚಂದ್ರು ಎಂಬುವವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸ್ಥಳಕ್ಕೆ ಪಿಎಸ್‌ಐ ಮಹೇಶ್ ಹೊಸಪೇಟೆ ಭೇಟಿ ನೀಡಿದ್ದರು. ಮೊಳಕಾಲ್ಮುರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

17/05/2026 10:59 am

Cinque Terre

8.36 K

Cinque Terre

0

ಸಂಬಂಧಿತ ಸುದ್ದಿ