ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಅಪ್ಪನ ಸೆಲ್ಫಿ ಗೀಳಿಗೆ ಪುಟಾಣಿ ಮಗು ಬಲಿ - ನಾಲೆ ನೀರಲ್ಲಿ ಕೊಚ್ಚಿ ಹೋದ ಬಾಲಕ

ಚಿತ್ರದುರ್ಗ: ಹೀಗೆ ರಭಸವಾಗಿ ಹರಿಯುತ್ತಿರುವ ನಾಲೆ ನೀರು... ನೀರಲ್ಲಿ ಕೊಚ್ಚಿ ಹೋಗುತ್ತಿದ್ದವನ ರಕ್ಷಣೆ ಮಾಡುತ್ತಿರುವ ಪ್ರವಾಸಿಗರು... ಸೆಲ್ಫಿ ಹುಚ್ಚಿಗೆ ಬಲಿಯಾಗಿರುವ ಬಾಲಕ ಮೃತ ದೇಹ ಹೊರ ತೆಗೆಯುತ್ತಿರುವ ಸಾರ್ವಜನಿಕರು....

ಈ ಹೃದಯವಿದ್ರಾವಕ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಡ್ಯಾಂ ಬಳಿ...

ಹೌದು.. ವಾಣಿ ವಿಲಾಸ ಸಾಗರ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿ ಬಿಡಲಾಗಿದೆ. ನಾಲೆಗಳ ಮೂಲಕ ನೀರು ನಯನ ಮನೋಹರವಾಗಿ ಹರಿಯುತ್ತಿದೆ. ಇಂಥ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದಾರೆ. ಆದ್ರೆ ಕೆಲ ಪ್ರವಾಸಿಗ ಹುಚ್ಚಾಟಕ್ಕೆ ಇಂಥದ್ದೇ ಸ್ಪಾಟ್ ಗಳು ಹಾಟ್ ಸ್ಪಾಟ್ ಗಳಾಗಿವೆ.

ನಿನ್ನೆ ಇದೇ ಸ್ಥಳಕ್ಕೆ ಆದಿವಾಳ ಮೂಲದ ಪ್ರವಾಸಿಗರು ನಾಲೆ ವೀಕ್ಷಣೆಗೆ ಆಗಮಿಸಿದ್ದರು. ಇದೇ ವೇಳೆ ಎಣ್ಣೆ ಮತ್ತಿನಲ್ಲಿದ್ದ ಯುವಕ ಜಾಫರ್ ಸಾಧಿಕ್ ಪುತ್ರನ ಜೊತೆ ಸೆಲ್ಫಿ ಹುಚ್ಚಾಟಕ್ಕೆ ಮುಂದಾಗಿದ್ದ. 4 ವರ್ಷದ ಪುಟಾಣಿ ಕಂದಮ್ಮನ ಜೊತೆ ಮೊಬೈಲ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಹರಿಯುವ ನೀರಿಗೆ ಇಳಿದಿದ್ದು, ಪುಟಾಣಿ ಬಾಲಕ ನೀರು ಪಾಲಾಗಿದ್ದಾನೆ.

ಇನ್ನೂ ಪುಟಾಣಿ ಕಂದಮ್ಮ ರಕ್ಷಣೆಗೆ ಅಪ್ಪ ಜಾಫರ್ ಕೂಡಾ ನೀರಿನಲ್ಲೇ ಈಜಿದ್ದಾನೆ. ಆದ್ರೆ ತನ್ನ ಪುತ್ರ ಸಮರ್ (04) ರಕ್ಷಣೆ ಯತ್ನ ವಿಫಲವಾಗಿದೆ. ಇದೇ ವೇಳೆ ನೀರಿನ ರಭಸಕ್ಕೆ ಜಾಫರ್ ಸಾಧಿಕ್ ಕೂಡಾ ಕೊಚ್ಚಿ ಹೋಗುತ್ತಿದ್ದು, ಇದೇ ವೇಳೆ ಸ್ಥಳೀಯ ಪ್ರವಾಸಿಗರು ಆತನನ್ನ ರಕ್ಷಣೆ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕೊಚ್ಚಿ ಹೋಗಿದ್ದ ಪುಟಾಣಿ ಸಮರ್ ಮೃತದೇಹ ಪತ್ತೆ ಮಾಡಿದ್ದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಒಟ್ಟಾರೆ ಅಪ್ಪನ ಸೆಲ್ಫಿ ಗೀಳಿಗೆ ಮುದ್ದಾಗಿ ಬೆಳೆಸಿದ್ದ ಪುತ್ರ ಸಮರ್ ಬಾರದ ಲೋಕಕ್ಕೆ ಹೋಗಿದ್ದಾನೆ. ಇನ್ನಾದರೂ ಪೊಲೀಸ್ ಇಲಾಖೆ ಇಂಥ ಡೇಂಜರ್ ಸ್ಪಾಟ್ ಗಳಲ್ಲಿ ಭದ್ರತೆ ನೀಡಬೇಕು ಅನ್ನೋದು ನಮ್ಮ ಆಶಯ

Edited By : Shivu K
PublicNext

PublicNext

18/05/2026 09:57 pm

Cinque Terre

20.22 K

Cinque Terre

0

ಸಂಬಂಧಿತ ಸುದ್ದಿ