ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು: ಮಳೆಯ ಅಬ್ಬರಕ್ಕೆ ಸಂಪೂರ್ಣವಾಗಿ ನೆಲಕಚ್ಚಿದ ಪಪ್ಪಾಯಿ ಬೆಳೆ

ಮೊಳಕಾಲ್ಮೂರು: ತಡರಾತ್ರಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆಗೆ ಲಕ್ಷಾಂತರ ರೂಪಾಯಿ ಬೆಳೆದ ಪಪ್ಪಾಯಿ ಬೆಳೆ ಧರಾಶಾಹಿಯಾದ ಘಟನೆ ನಡೆದಿದೆ.

ಮೊಳಕಾಲ್ಮೂರು ತಾಲೂಕಿನ

ಕೊನಸಾಗರ ಗ್ರಾ.ಪಂ. ವ್ಯಾಪ್ತಿಯ ನೇತ್ರನಹಳ್ಳಿಯ ಪಾಲಮ್ಮ ಗುರುಬಸಪ್ಪ ಎಂಬವರಿಗೆ ಸೇರಿದ 3ಎಕರೆ 20 ಗುಂಟೆ, ಹಾಗೂ ಸೂರಯ್ಯನವರಿಗೆ ಸೇರಿದ ಸುಮಾರು 3 ಎಕರೆ, ಹಾಗೂ ಕೊನಸಾಗರ ಗ್ರಾಮದ ಮಂಜುನಾಥ ಎಂಬವರಿಗೆ ಸೇರಿದ 3 ಎಕರೆ ಪಪ್ಪಾಯಿ ಬೆಳೆ ನಾಶವಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರ ಗಾಯದ ಮೇಲೆ ವರುಣರಾಯ ಬರೆ ಎಳೆದಿದ್ದಾನೆ.

ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

Edited By : Manjunath H D
PublicNext

PublicNext

27/05/2026 05:42 pm

Cinque Terre

5.69 K

Cinque Terre

0

ಸಂಬಂಧಿತ ಸುದ್ದಿ