ಚಳ್ಳಕೆರೆ::ಕರ್ನಾಟಕ ರಾಜ್ಯ ರೈತ ಸಂಘದ ವಿವಿಧ ನಾಲ್ಕು ಬಣಗಳು ಒಗ್ಗೂಡಿ ಮೇ.27 ರಂದು ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ, ಸಾವಿರಾರು ರೈತರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸುಮಾರು ಐದು ಸಾವಿರ ರೈತರನ್ನು ಸೇರಿಸಲು ಗ್ರಾಮಾಂತರ ಭಾಗದಲ್ಲಿ ಸಂಘಟನೆ ರೂಪಿಸಲಾಗಿದೆ.
2025_26 ರಲ್ಲಿ ತಾಲೂಕಿನ 36707 ರೈತರು ಬೆಳೆ ವಿಮೆಗಾಗಿ ವಂತಿಕೆ ಹಣ ಕಟ್ಟಲಾಗಿದೆ. ಕಳೆದ ವರ್ಷ ಮಳೆಯ ಕೊರತೆಯಿಂದ ಸಂಪೂರ್ಣ ಶೇಂಗಾ ಬೆಳೆ ನಷ್ಟವಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ ವಿಮೆ ಹಣಕ್ಕಾಗಿ ಸಾಕಷ್ಟು ಪ್ರತಿಭಟನೆ ನಡೆಸಿದ್ದರೂ ನ್ಯಾಯ ಸಿಕ್ಕಿಲ್ಲ ಎನ್ನುವ ರೈತ ಸಂಘಟನೆಗಳ ಮುಖಂಡರು, ನಾಲ್ಕು ಬಣಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ಮೂಲಕ ವಿಮೆ ಹಣ ಪಡೆಯಲು ತೀರ್ಮಾನಿಸಿದ್ದೇವೆ. ಈಗಾಗಲೇ ಪೂರ್ವಭಾವಿ ಸಭೆ ಮಾಡಿಕೊಂಡಿದ್ದೇವೆ. ವಿಮೆ ಹಣ ಕಟ್ಟಿರುವ ಪ್ರತಿ ರೈತರ ಮನೆಯಿಂದ ಒಬ್ಬರು ಹೋರಾಟಕ್ಕೆ ಬರುವಂತೆ ಕರೆ ನೀಡಿದ್ದೇವೆ.
ಕರಪತ್ರ ಮುದ್ರಿಸಿ ಪ್ರತಿ ಹಳ್ಳಿಗಳಿಗೂ ಜಾಗೃತಿ ಮೂಡಿಸಿದ್ದೇವೆ. ಸುಮಾರು ಐದು ಸಾವಿರ ರೈತರು ಸೇರುವ ಪ್ರತಿಭಟನೆಯಲ್ಲಿ ಚಳ್ಳಕೆರೆ ನಗರ ದೇವತೆ ಚಳ್ಳಕೆರೆಮ್ಮ ದೇವಸ್ಥಾನದಿಂದ ನೆಹರು, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿ ಬಂದು, ತಾಲೂಕು ಕಚೇರಿ ಬಳಿ ಜಮಾವಣೆ ಆಗುತ್ತೇವೆ. ತಕ್ಷಣವೇ ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಜೈಲಿಗೆ ಹಾಕಿದರೂ ಹೆದರದೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ ಕೆ.ಪಿ. ಭೂತಯ್ಯ, ಕೆ. ಚಿಕ್ಕಣ್ಣ, ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ.
Kshetra Samachara
26/05/2026 12:18 pm
LOADING...