ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗವಿಕಲರ ವಿವಿಧ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸುವಂತೆ ಒತ್ತಾಯಿಎಇ ಪ್ರತಿಭಟನೆ

ಚಳ್ಳಕೆರೆ: ಅಂಗವಿಕಲರ ವಿವಿಧ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ತಾಲೂಕು ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದರು. ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಅಂಗವಿಕಲ ಮಕ್ಕಳಿಗೆ ಮಾಸಿಕ ಪಿಂಚಣಿ ನಿಗದಿ ಅವಧಿಯಲ್ಲಿ ನೀಡಬೇಕು. ಅಂಗವಿಕಲರಿಗೆ ನಿವೇಶನ ವ್ಯವಸ್ಥೆ ಕಲ್ಪಿಸಬೇಕು. ಶಿಕ್ಷಣಕ್ಕೆ ಪೂರಕ ಅನುಕೂಲ ಸೌಲಭ್ಯ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಕೆಲಸಗಳಿಗೆ ಮೊದಲ ಆದ್ಯತೆ ಇರಬೇಕು ಎಂದು ಮನವಿ ಮಾಡಿದರು.

ಸಂಘದ ಒಕ್ಕೂಟ ತಾಲೂಕಾಧ್ಯಕ್ಷ ಎಂ.ಎಸ್. ಶಿವಕುಮಾರ್ ಮಾತನಾಡಿ, ಅಂಗವಿಕಲರ ಕುಂದು ಕೊರತೆ ಹೇಳಿಕೊಳ್ಳಲು ತಾಲೂಕು ಆಡಳಿತ ಪ್ರತಿ ತಿಂಗಳು ಪ್ರತ್ಯೇಕ ಸಭೆ ಕರೆಯಬೇಕು. ತಾಲೂಕು ಕೇಂದ್ರ ಕೇಂದ್ರದಲ್ಲಿ ಅಂಗವಿಕಲರಿಗೆ ಸಮುದಾಯದ ಭವನ ನಿರ್ಮಾಣ ಮಾಡಿಕೊಡಬೇಕು. ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮದಲ್ಲಿ ಅಂಗವಿಕಲರ ಭಾಗವಹಿಸುವಿಕೆಗೆ ಅವಕಾಶ ಮಾಡಿಕೊಡಬೇಕು. ಪ್ರತಿ ತಿಂಗಳು 10 ರಂದು ಪಿಂಚಣಿ ತಲುಪುವ ರೀತಿ ವ್ಯವಸ್ಥೆ ಮಾಡಬೇಕು. ಪಂಚಾಯತಿ ಹಂತದಲ್ಲಿ ಅಂಗವಿಕಲರ ಪರಿಕರಗಳ ವಿತರಣೆಗೆ ಕ್ರಮ ವಹಿಸಲು ತಾಲೂಕು ಆಡಳಿತ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

Edited By : PublicNext Desk
Kshetra Samachara

Kshetra Samachara

26/05/2026 12:02 pm

Cinque Terre

720

Cinque Terre

0

ಸಂಬಂಧಿತ ಸುದ್ದಿ