ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಲಸೆ ಕುರಿಗಾಳಿಗಳಿಗೆ ಬೇಕಿದೆ ಸುರಕ್ಷತೆ ಹಾಗೂ ಭದ್ರತೆ..!

ಚಳ್ಳಕೆರೆ ತಾಲೂಕು ಬಯಲು ಸೀಮೆ ಪ್ರದೇಶ. ವರ್ಷದ ವಾಡಿಕೆ ಮಳೆಯೂ ನಿರೀಕ್ಷೆ ಇರುವುದಿಲ್ಲ. ಇಲ್ಲಿ ಯಾವುದೇ ರೀತಿಯ ಜಲಾಶಯ ಮತ್ತು ನೀರಿನ ಸಂಗ್ರಹದ ಮೂಲಗಳಿಲ್ಲ. ಇದರಿಂದ ಜಾನುವಾರುಗಳು ಮತ್ತು ಕುರಿ,ಮೇಕೆಗಳ ಸಾಕಾಣಿಕೆಗೆ ಮೇವು ಮತ್ತು ಕುಡಿಯುವ ನೀರಿಗೂ ಕಷ್ಟದ ಪರಿಸ್ಥಿತಿ ಕಾಣುತ್ತೇವೆ. ತಾಲೂಕಿನಲ್ಲಿ ಸುಮಾರು 5,11000 ಕುರಿ,ಮೇಕೆಗಳಿವೆ. ಇವುಗಳ ಪೋಷಣೆಗೆ ಇಲ್ಲಿ ವರ್ಷಪೂರ್ತಿ ಮೇವಿಗೆ ಅನುಕೂಲ ಇಲ್ಲ. ಹಾಗಾಗಿ, ಕುರಿಗಾಹಿಗಳು ತಮ್ಮ ಕುರಿ,ಮೇಕೆಗಳ ಪೋಷಣೆ ಮೇವು, ನೀರು ಅರಸಿ, ಮಳೆ,ಗಾಳಿ ಲೆಕ್ಕಿಸದೆ ಸಾವಿರಾರು ಕಿಮೀ ದೂರ ಕ್ರಮಿಸಿ ಚಿಕ್ಕಮಗಳೂರು, ಹಾಸನ,ಮಂಡ್ಯ, ಅರಸೀಕೆರೆ ಹೀಗೆ ನೀರಾವರಿ ಮತ್ತು ಜಲಾಶಯಗಳಿರುವ ಪ್ರದೇಶಕ್ಕೆ ವಲಸೆ ಹೋಗುವ ಪರಿಪಾಟು ರೂಢಿಸಿಕೊಂಡಿದ್ದಾರೆ.

ತಾಲೂಕಿನಿಂದ ಜನವರಿ ತಿಂಗಳಲ್ಲಿ ಕುರಿಗಳ ಹೊಡೆದುಕೊಂಡು ವಲಸೆ ಹೋಗಿದ್ದವರು, ಈ ಭಾಗದಲ್ಲಿ ಉತ್ತಮ ಮಳೆಯಾಗಿರುವ ಸುದ್ದಿ ತಿಳಿದು ಕುರಿಗಳ ಸಹಿತ ಮರಳಿ ತಮ್ಮ ಊರುಗಳಿಗೆ ಬರುತ್ತಿದ್ದಾರೆ. ವಲಸೆ ಹೋದ ಕಡೆ ಜೀವನಕ್ಕೆ ಭದ್ರತೆ ಇದಲ್ಲದೆ, ಅನೇಕ ಸಮಸ್ಯೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವಾಗ ಸಂಭವಿಸುವ ರಸ್ತೆ ಅಪಘಾತ ಘಟನೆಗಳಲ್ಲಿ ಜೀವ ಕಳೆದುಕೊಳ್ಳುವ ಭೀತಿಯಲ್ಲಿ ಈ ಸಣ್ಣ ಜೀವಗಳನ್ನು ( ಕುರಿ) ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ವಲಸೆಕಡೆ ಗುಡ್ಡಗಾಡಿನಲ್ಲಿ ಉಳಿದುಕೊಳ್ಳುತ್ತೇವೆ. ಸುರಕ್ಷಿತ ನೆಲೆ ಇರುವುದಿಲ್ಲ. ಕಾಡು ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳಲು ಸುಸಜ್ಜಿತ ಟೆಂಟ್ ಕಟ್ಟಿಕೊಳ್ಳುವ ಪರಿಕರ ಮತ್ತು ಕಳ್ಳರಿಂದ ಜೀವ ಭದ್ರತೆಗೆ ಗನ್ ಅನುಮತಿ ಕೊಡುವ ಯೋಜನೆ ಜಾರಿ ಆಗಬೇಕು ಎನ್ನುವ ಕುರಿಗಾಹಿಗಳು, ನಮ್ಮಲ್ಲಿ ಹುಲ್ಲುಗಾವಲು, ಅಡವಿಯಲ್ಲಿ ನೀರಿನ ಅನುಕೂಲ ಇದ್ದಿದ್ದರೆ ಅಷ್ಟು ದೂರ ಕುಟುಂಬ ಬಿಟ್ಟು ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ.

Edited By : PublicNext Desk
Kshetra Samachara

Kshetra Samachara

26/05/2026 12:35 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ