ಗ್ರಾಹಕರ ಮನೆಗೆ ಆರ್ಡರ್ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಅಪರೂಪದ ದೃಶ್ಯ ಭಾರೀ ವೈರಲ್ ಆಗಿದೆ. ಹೌದು ಡೆಲಿವರಿ ಏಜೆಂಟ್ ಒಬ್ಬರು ಗ್ರಾಹಕರೊಬ್ಬರ ಮನೆಗೆ ಐಟಂ ಡೆಲಿವರಿ ಕೊಟ್ಟು ವಾಪಸ್ ಹೋಗ್ತಿದ್ದಾಗ ವಸ್ತುಗಳನ್ನ ನೀಡಿ ಆ ಮನೆಯ ಹೊರಗೆ ಮೂಲೆಯಲ್ಲಿ ಇಟ್ಟಿದ್ದ ಕ್ರಿಕೆಟ್ ಬ್ಯಾಟ್ ಅವರ ಕಣ್ಣಿಗೆ ಬೀಳುತ್ತದೆ.
ಕ್ರಿಕೆಟ್ ಮೇಲಿನ ಆಸೆಯನ್ನು ತಡೆಯಲಾರದೆ ಆ ಬ್ಯಾಟ್ ಅನ್ನು ಕೈಗೆತ್ತಿಕೊಳ್ಳುತ್ತಾರೆ. ತಾವೊಬ್ಬ ಮೈದಾನದಲ್ಲಿರುವ ಬ್ಯಾಟ್ಸ್‌ಮನ್ ಎಂಬಂತೆ ಒಂದೆರಡು ಬಾರಿ ಆಕರ್ಷಕವಾಗಿ ಬ್ಯಾಟ್ ಬೀಸುತ್ತಾರೆ. ನಂತರ ಅತ್ಯಂತ ಪ್ರೀತಿ ಮತ್ತು ಗೌರವದಿಂದ ಆ ಕ್ರಿಕೆಟ್ ಬ್ಯಾಟ್‌ಗೆ ಮುತ್ತಿಟ್ಟು ಮರಳಿ ಅದನ್ನು ಯಥಾಸ್ಥಾನದಲ್ಲಿ ಇಟ್ಟು ಅಲ್ಲಿಂದ ಹೊರಡುತ್ತಾರೆ.
ಮನೆಯ ಹೊರಗಡೆ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಇಡೀ ದೃಶ್ಯ ಸೆರೆಯಾಗಿದೆ. ಬದುಕಿನ ಜಂಜಾಟ, ಕೆಲಸದ ಒತ್ತಡದ ನಡುವೆಯೂ ಯುವಕನಿಗೆ ಕ್ರಿಕೆಟ್ ಮೇಲಿರುವ ಈ ಅಪಾರ ಪ್ರೀತಿ ಮತ್ತು ಗೌರವವನ್ನು ಕಂಡು ಇಂಟರ್ನೆಟ್ ಜಗತ್ತು ಭಾವುಕವಾಗಿದೆ. ಪರಿಸ್ಥಿತಿ ಏನೇ ಇರಲಿ, ನಮ್ಮೊಳಗಿನ ಕನಸು ಮತ್ತು ಇಷ್ಟಪಡುವ ವಸ್ತುವಿನ ಮೇಲಿನ ಪ್ರೀತಿ ಎಂದಿಗೂ ಸಾಯಬಾರದು ಎಂಬುದಕ್ಕೆ ಈ ಯುವಕನೇ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
PublicNext
20/05/2026 04:30 pm
LOADING...