ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ದೇಶಕ್ಕೆ ಬೇಕಾಗಿದ್ದು ಗಂಭೀರ ಪ್ರಧಾನಿ, ಸಿಕ್ಕಿದ್ದು ಮಾತ್ರ ಸೆಲ್ಫ್ ಅಬ್ಸೆಸ್ಡ್ ಇನ್ಫ್ಲುಯೆನ್ಸರ್!": ಮೋದಿ ಕಾಲೆಳೆದ ಖರ್ಗೆ

ಬೆಂಗಳೂರು : ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಮೆಲೊಡಿ' ಚಾಕೊಲೇಟ್ ನೀಡಿರುವ ವೈರಲ್ ವಿಡಿಯೋ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆ ಮತ್ತು ಟ್ರೋಲ್‌ಗೆ ಕಾರಣವಾಗಿದೆ. ಈ ಕುರಿತು ಪ್ರಧಾನಿ ಮೋದಿಯವರನ್ನು ತೀವ್ರವಾಗಿ ವ್ಯಂಗ್ಯವಾಡಿರುವ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, "ದೇಶಕ್ಕೆ ಒಬ್ಬ ಗಂಭೀರ ಪ್ರಧಾನಿ ಹಾಗೂ ರಾಜತಾಂತ್ರಿಕ ಮುತ್ಸದ್ದಿಯ ಅಗತ್ಯವಿತ್ತು. ಆದರೆ ನಮಗೆ ಸಿಕ್ಕಿದ್ದು ಮಾತ್ರ ತನ್ನಲ್ಲೇ ಮುಳುಗಿರುವ ಒಬ್ಬ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್!" ಎಂದು ಕಟುವಾಗಿ ಟೀಕಿಸಿದ್ದಾರೆ.

"ದೇಶಕ್ಕೆ ಬೇಕಾಗಿದ್ದು ಗಂಭೀರ ಪ್ರಧಾನಿ, ಸಿಕ್ಕಿದ್ದು ಮಾತ್ರ ಸೆಲ್ಫ್ ಅಬ್ಸೆಸ್ಡ್ ಇನ್ಫ್ಲುಯೆನ್ಸರ್!" ಎಂದು ತಮ್ಮ ಟ್ವೀಟ್ ಮೂಲಕ ಮೋದಿಯವರ 'ಮೆಲೊಡಿ ರೀಲ್ಸ್'ಗೆ ಖರ್ಗೆ ಕಾಲೆಳೆದಿದ್ದಾರೆ.

ಹೌದು ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯವರ ಈ ನಡೆಗೆ ಲೇವಡಿ ಮಾಡಿರುವ ಪ್ರಿಯಾಂಕ್ ಖರ್ಗೆ, ಒಂದು ಆಸಕ್ತಿದಾಯಕ ಕವನದ ಸಾಲುಗಳೊಂದಿಗೆ ತಮ್ಮ ವಾಗ್ದಾಳಿಯನ್ನು ಆರಂಭಿಸಿದ್ದಾರೆ:

"ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಹುಡುಕುವುದು ಕಾಯಬಹುದು... ಆದರೆ ಮೆಲೋನಿ ಮೇಡಂಗೆ 'ಮೆಲೊಡಿ' ಕೊಡುವುದು ತಡವಾಗಬಾರದು!" ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸರ್ಕಾರದ ರಾಜತಾಂತ್ರಿಕ ನೀತಿಯನ್ನು ತೀವ್ರವಾಗಿ ಪ್ರಶ್ನಿಸಿರುವ ಖರ್ಗೆ, "ಒಮ್ಮೆ ಕಲ್ಪನೆ ಮಾಡಿಕೊಳ್ಳಿ. ದ್ವಿಪಕ್ಷೀಯ ಸಂಬಂಧಗಳು ಹಾಗೂ ವಿದೇಶಾಂಗ ನೀತಿಯಂತಹ ಅತ್ಯಂತ ನಿರ್ಣಾಯಕ ವಿಷಯಗಳ ಬಗ್ಗೆ ಚರ್ಚಿಸುವ ಮಧ್ಯದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಏನೋ ಯೋಚಿಸಿರಬೇಕು. 'ಹೇ, ನನ್ನ ಅಧಿಕೃತ ಪ್ರವಾಸದ ವೇಳೆ ನನ್ನ ಜೊತೆ ಒಂದು ಪ್ಯಾಕೆಟ್ ಮೆಲೊಡಿ ಚಾಕೊಲೇಟ್ ತೆಗೆದುಕೊಂಡು ಹೋಗುತ್ತೇನೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಕಂಟೆಂಟ್ ಆಗುತ್ತದೆ' ಎಂದು ಅವರು ಅಂದುಕೊಂಡಂತಿದೆ," ಎಂದು ಲೇವಡಿ ಮಾಡಿದ್ದಾರೆ.

"ದೇಶದ ಜನರ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಪ್ರಧಾನಿಯವರು ಇಂತಹ ಬಾಲಿಶ ರೀಲ್ಸ್‌ಗಳ ಮೊರೆ ಹೋಗಿದ್ದಾರೆ. ಆದರೆ ಇಲ್ಲಿ ನಿಜವಾದ ಜೋಕ್ ಆಗುತ್ತಿರುವುದು ನಮ್ಮೆಲ್ಲರ (ದೇಶದ ಜನರ) ಮೇಲೆಯೇ," ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

ದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟು ತೀವ್ರವಾಗಿರುವಾಗ, ಪ್ರಧಾನಿಯವರು ಅಂತರರಾಷ್ಟ್ರೀಯ ವೇದಿಕೆಯನ್ನು ಕೇವಲ ಸಾಮಾಜಿಕ ಜಾಲತಾಣದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಒಟ್ಟಾಗಿ ಟೀಕಿಸಿದ್ದಾರೆ. ಮೋದಿಯವರ 'ಮೆಲೊಡಿ' ರಾಜತಾಂತ್ರಿಕತೆಯು ಇಂಟರ್ನೆಟ್‌ನಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದೆ.

Edited By : Nirmala Aralikatti
PublicNext

PublicNext

21/05/2026 09:08 am

Cinque Terre

52.56 K

Cinque Terre

7

ಸಂಬಂಧಿತ ಸುದ್ದಿ