ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ 'ಕಾಕ್ರೋಚ್ ಜನತಾ ಪಕ್ಷ'! ನಾಲ್ಕೇ ದಿನಕ್ಕೆ 1 ಕೋಟಿಗೂ ಅಧಿಕ ಫಾಲೋವರ್ಸ್

ಇನ್‌ಸ್ಟಾಗ್ರಾಂನಲ್ಲಿ ಸದ್ಯ @cockroachjantaparty ಎಂಬ ಖಾತೆ ರಾಕೆಟ್ ವೇಗದಲ್ಲಿ ಓಡುತ್ತಿದ್ದು, ಇಡೀ ದೇಶದ ಗಮನ ಸೆಳೆದಿದೆ. ಆರಂಭವಾದ ಕೇವಲ ನಾಲ್ಕೇ ದಿನಗಳಲ್ಲಿ 1 ಕೋಟಿಗೂ (10.6 Million) ಅಧಿಕ ಫಾಲೋವರ್ಸ್ ಗಳಿಸುವ ಮೂಲಕ, ಇದು ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನೇ (8.7 Million) ಹಿಂದಿಕ್ಕಿದೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು ಅರ್ಜಿಯೊಂದರ ವಿಚಾರಣೆ ನಡೆಸುವಾಗ, "ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ ರೀತಿ ವರ್ತಿಸುತ್ತಿದ್ದಾರೆ" ಎಂದು ಕಠಿಣವಾಗಿ ಹೇಳಿಕೆ ನೀಡಿದ್ದರು. ನ್ಯಾಯಾಧೀಶರ ಈ 'ಜಿರಳೆ' ಪದಪ್ರಯೋಗದಿಂದ ಬೇಸತ್ತ ಯುವಕರು, ಅದನ್ನೇ ಅಸ್ತ್ರವಾಗಿಸಿಕೊಂಡು ಸೃಷ್ಟಿಸಿದ್ದೇ ಈ ವಿಡಂಬನಾತ್ಮಕ ಕಾಕ್ರೋಚ್ ಜನತಾ ಪಕ್ಷ. ಇದು ಕೇವಲ ತಮಾಷೆಯ ಪೇಜ್ ಅಲ್ಲ, ಯುವಕರ, ಯುವಕರಿಗಾಗಿ ಮತ್ತು ಯುವಕರಿಂದ" ರೂಪಿತವಾಗಿರುವ ಡಿಜಿಟಲ್ ವೇದಿಕೆ.

ನಿರುದ್ಯೋಗ, ಸರ್ಕಾರಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ರಾಜಕೀಯ ಹೊಣೆಗಾರಿಕೆ ಇಂತಹ ಗಂಭೀರ ಯುವ ಸಮಸ್ಯೆಗಳ ಪರವಾಗಿ ಧ್ವನಿ ಎತ್ತುವುದೇ ಈ ಪುಟದ ಮುಖ್ಯ ಉದ್ದೇಶವಾಗಿದೆ. ಕೇವಲ 56 ಪೋಸ್ಟ್‌ಗಳ ಮೂಲಕ ಮಿಲಿಯನ್‌ಗಟ್ಟಲೆ ಯುವಕರನ್ನು ಸೆಳೆದಿರುವ ಈ ಪೇಜ್, "ಯುವಕರ ಶಕ್ತಿಯನ್ನು ಅಂಡರ್‌ ಎಸ್ಟಿಮೇಟ್ ಮಾಡಬೇಡಿ" ಎಂಬ ಸಂದೇಶ ನೀಡುತ್ತಿದೆ.

Edited By : Nirmala Aralikatti
PublicNext

PublicNext

21/05/2026 02:46 pm

Cinque Terre

35.9 K

Cinque Terre

5

ಸಂಬಂಧಿತ ಸುದ್ದಿ