ಶಿರಸಿ: ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಕಪ್ಪೆ ಚಿಪ್ಪು ಮೀನುಗಾರಿಕೆಗೆ ತೆರಳಿದ್ದಾಗ ನೀರಿನ ಸೆಳತಕ್ಕೆ ಸಿಲುಕಿ ನಮ್ಮ ಜಿಲ್ಲೆಯ ಒಂದೇ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು ಎಂಟು ಮಂದಿ ಅಸುನೀಗಿದ ಸುದ್ದಿ ಕೇಳಿ ಕರುಳು ಹಿಂಡಿದಂತಾಗಿದೆ. ನಮ್ಮದೇ ಕಣ್ಣೆದುರು ಓಡಾಡಿಕೊಂಡಿದ್ದ ನಮ್ಮ ಜಿಲ್ಲೆಯ ಈ ಕುಟುಂಬವನ್ನು ಮತ್ತು ನಮ್ಮ ಜನರನ್ನು ಹೀಗೆ ಕಳೆದುಕೊಳ್ಳುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಈ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದ್ದು, ಇಡೀ ಜಿಲ್ಲೆಯೇ ಕಣ್ಣೀರಿನಲ್ಲಿ ಮುಳುಗಿದೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ತೀವ್ರ ಆಘಾತದಲ್ಲಿರುವ ಆ ಕುಟುಂಬದವರಿಗೆ ಮತ್ತು ಬಂಧು-ಮಿತ್ರರಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಎಂದು ಭೀಮಣ್ಣ ಟಿ.ನಾಯ್ಕ ಶಾಸಕರ ಕಾರ್ಯಾಲಯದಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
24/05/2026 08:23 pm
LOADING...