ಉಡುಪಿ: ಭಟ್ಕಳದಲ್ಲಿ ಸಂಭವಿಸಿದ ಕಪ್ಪೆಚಿಪ್ಪು ದುರಂತದಲ್ಲಿ ಪಾರಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಾದೇವಿ ನಾಯ್ಕ್ ಅವರು ಘಟನೆ ಕುರಿತು ಮನಕಲಕುವ ವಿವರಗಳನ್ನು ಹಂಚಿಕೊಂಡಿದ್ದಾರೆ.
ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, “ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ನಾವು ನದಿಗೆ ತೆರಳಿದ್ದೆವು. ನಮ್ಮ ಕುಟುಂಬದ 13 ಮಂದಿ ಹಾಗೂ ಪರಿಸರದ ಓರ್ವ ವ್ಯಕ್ತಿ ಸೇರಿ ಒಟ್ಟು 14 ಮಂದಿ ತಂಡದಲ್ಲಿದ್ದೆವು. ನಾವು ಕಪ್ಪೆಚಿಪ್ಪು ಆಯ್ದು ಹಿಂದಿರುಗುತ್ತಿದ್ದಾಗ ಏಕಾಏಕಿ ನದಿಯಲ್ಲಿ ನೀರಿನ ಅಬ್ಬರ ಹೆಚ್ಚಾಯಿತು. ನನ್ನ ಕಣ್ಣ ಮುಂದೆಯೇ ಎಲ್ಲರೂ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ನನಗೆ ಸ್ವಲ್ಪ ಈಜು ಬರುವುದರಿಂದ ಹೇಗೋ ದಡ ಸೇರುವಲ್ಲಿ ಯಶಸ್ವಿಯಾದೆ” ಎಂದು ಕಣ್ಣೀರಿಟ್ಟರು.
“ಈಜುತ್ತಾ ಸಹಾಯಕ್ಕಾಗಿ ಕೂಗುತ್ತಿದ್ದಾಗ ದೋಣಿಯಲ್ಲಿದ್ದ ಯುವಕ ನನ್ನನ್ನೂ ಮತ್ತೊಬ್ಬರನ್ನೂ ರಕ್ಷಿಸಿದರು. ಇನ್ನೋರ್ವರು ಈಜಿ ದಡ ಸೇರಿದ್ದರು. ಆದರೆ ನೀರಿನ ವೇಗ ಸುನಾಮಿಯಂತಿತ್ತು. ಈಜು ಬಲ್ಲವರಿಗೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
“ಕಪ್ಪೆಚಿಪ್ಪು ಆಯುವ ಅನುಭವವೂ ನಮಗಿತ್ತು. ನದಿಯ ಸ್ವಭಾವದ ಅರಿವೂ ಇತ್ತು. ಆದರೂ ಇಂತಹ ದುರಂತ ಸಂಭವಿಸಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ನೀರಿನ ಅಬ್ಬರ ಏಕಾಏಕಿ ಹೆಚ್ಚಾಯಿತು” ಎಂದು ಮಹಾದೇವಿ ನಾಯ್ಕ್ ಕಣ್ಣೀರಾದರು.
“ನಮ್ಮವರನ್ನೆಲ್ಲ ಕಳೆದುಕೊಂಡು ಈಗ ಆಸ್ಪತ್ರೆಯಲ್ಲಿ ಮಲಗುವ ಪರಿಸ್ಥಿತಿ ನನಗೆ ಬಂದಿದೆ” ಎಂದು ಅವರು ಭಾವುಕರಾದರು.
PublicNext
25/05/2026 01:18 pm
LOADING...