ಉಡುಪಿ ಜಿಲ್ಲೆಯ ಕುಂದಾಪುರ ಕಂದಾಯ ಇಲಾಖೆಯ ಕಟ್ಟಡದ ದುಸ್ಥಿತಿ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಕಟ್ಟಡದ ಮೇಲ್ಚಾವಣಿಗೆ ಟಾರ್ಪಲ್ ಹೊದಿಸಲಾಗಿದ್ದು, ಈ ದೃಶ್ಯ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸರ್ಕಾರಿ ಕಚೇರಿಗಳ ಅಭಿವೃದ್ಧಿಯ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿರುವಾಗ, ಪ್ರಮುಖ ಕಚೇರಿಯೊಂದು ಹೀಗೆ ದುಸ್ಥಿತಿಯಲ್ಲಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
"ಇದು ಕಂದಾಯ ಇಲಾಖೆ ಕಚೇರಿಯೋ? ಅಥವಾ ಕುಸಿಯುವ ಹಂತದ ಕಟ್ಟಡವೋ?" ಎಂಬ ಪ್ರಶ್ನೆ ಇದೀಗ ವ್ಯಾಪಕವಾಗಿ ಕೇಳಿಬರುತ್ತಿದೆ. ಕುಂದಾಪುರ ಭಾಗದಲ್ಲಿ ಹಳೆಯ ಕಟ್ಟಡಗಳು ಒಂದೊಂದಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ಈ ಕಚೇರಿಯ ಅವ್ಯವಸ್ಥೆ ಮಾತ್ರ ಕೇಂದ್ರ ಬಿಂದುವಾಗಿ ನಿಂತಿದೆ. ಟಾರ್ಪಲ್ ಶ್ರೀರಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಚೇರಿಯ ಪರಿಸ್ಥಿತಿ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.
ಪ್ರಜ್ಞಾವಂತ ನಾಗರಿಕರು ಈ ಕಟ್ಟಡವನ್ನು ತಕ್ಷಣ ದುರಸ್ತಿಪಡಿಸಬೇಕು ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
25/05/2026 02:41 pm
LOADING...