ಮಂಗಳೂರು:ಮುಂಬೈ ಸಿಎಸ್ ಎಂಟಿ ನಿಲ್ದಾಣದ ಪ್ಲಾಟ್ ಫಾರ್ಮ್ ವಿಸ್ತರಣೆ ಕಾಮಗಾರಿ ಇನ್ನು 10 ದಿನಗಳ ಕಾಲ ಮುಂದು ವರಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಮುಂದುವರಿಯಲಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.
ಮಂಗಳೂರು ಜಂಕ್ಷನ್ ಹಾಗೂ ಮುಂಬೈ ಸಿಎಸ್‌ಎಂಟಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಮೇ 20ರಿಂದ 29ರವರೆಗೆ ಥಾಣೆಯಲ್ಲೇ ಮುಕ್ತಾಯಗೊಳಿಸಲಾಗುತ್ತದೆ. ಅದೇ ರೀತಿ ಮಡಗಾಂವ್ ಜಂಕ್ಷನ್ ಹಾಗೂ ಮುಂಬೈ ಸಿಎಸ್‌ಎಂಟಿ ನಡುವಿನ ತೇಜಸ್ ರೈಲಿನ ಸಂಚಾರವನ್ನು ದಾದರ್‌ನಲ್ಲೇ ಕೊನೆಗೊಳಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
Kshetra Samachara
23/05/2026 10:20 pm
LOADING...