ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಲಾ ಕಾಲೇಜುಗಳಲ್ಲಿ ಹಿಂದೂಗಳು ಕೇಸರಿ ಶಾಲ್ ಧರಿಸಲು ಕರೆ ನೀಡಿದ್ದಕ್ಕೆ ಮುಸ್ಲಿಂ ಮುಖಂಡ, ಮತ್ತು ಹಾಗೂ ಕಾಂಗ್ರೆಸ್ ಮುಖಂಡ ಎಂ ಸಿ ಮುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಸಿ ಮುಲ್ಲಾ, ಹಾಜರಾತಿ ಪಡೆಯುವಾಗ ವಿದ್ಯಾರ್ಥಿಗಳು ಜೈ ಶ್ರೀ ರಾಮ್ ಹೇಳ ಬೇಕೆಂದಿದ್ದಿದ್ದಾರೆ. ಅದರ ಬದಲು ಎಲ್ಲರೂ ಅವರವರ ಸಮುದಾಯದ ಮಹಾನ್ ವ್ಯಕ್ತಿಗಳಿಗೆ ಜೈ ಎಂದರೆ ಏನಾಗುತ್ತೆ ಎಂದು ಪ್ರಶ್ನಿಸಿದರು.
ಯತ್ನಾಳ್ ತಮ್ಮ ಅಧ್ಯಕ್ಷತೆಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಹಾಕಿದವರು ಬರಬೇಡಿ ಎಂದು ಹೇಳಲಿ ಈ ಬಗ್ಗೆ ತಮ್ಮದೇ ಸಂಸ್ಥೆಯಲ್ಲಿ ಮೊದಲು ಬೋರ್ಡ್ ಹಾಕಲಿ ಎಂದು ಸವಾಲು ಹಾಕಿದರು. ನಿಮ್ಮಿಂದಲೇ ಮೊದಲು ಆರಂಭ ಆಗಲಿ, ನಿಮ್ಮ ಹೇಳಿಕೆಯನ್ನು ನಿಮ್ಮ ಶಿಕ್ಷಣ ಸಂಸ್ಥೆಯಲ್ಲಿ ಮೊದಲು ಪಾಲಿಸಿ ಆಮೇಲೆ ರಾಜ್ಯಾದ್ಯಂತ ಜಾರಿಗೆ ತರಬಹುದು ಅಂತ ಕುಟುಕಿದ್ದಾರೆ. ಹಿರಿಯ ಜನ ಪ್ರತಿನಿಧಿ ಈ ರೀತಿಯಾಗಿ ಹೇಳಿಕೆ ಕೊಡೋದು ಸರಿ ಅಲ್ಲ. ಮಕ್ಕಳ ಹಿತದೃಷ್ಟಿ ಕಾಪಾಡಿ ಅಂತ ಮನವಿ ಮಾಡಿದ್ದಾರೆ.
Kshetra Samachara
26/05/2026 08:28 am
LOADING...