ವಿಜಯಪುರ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ಸಂಭವಿಸಿದೆ.
ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ರವಿಚಂದ್ರ ಮಾದರ (25) ಮೃತ ಯುವಕ ಗುತ್ತಿಗೆದಾರ ಎಂ ಎಸ್ ಪೂಜಾರಿ ಬಳಿ ಕಳೆದ ನಾಲ್ಕು ವರ್ಷದಿಂದ ಚಾಲಕನಾಗಿದ್ದ.
ಗುತ್ತಿಗೆದಾರ ಎಂ ಎಸ್ ಪೂಜಾರಿಗೆ ಸಂಬಂಧಿಸಿದ ಕಡಿ ಹಾಗೂ ಎಂ ಸ್ಯಾಂಡ್ ತಯಾರಿಸುವ ಘಟಕದಲ್ಲಿ ಘಟನೆ ಸಂಭವಿಸಿದ್ದು ಘಟನಾ ಸ್ಥಳದಲ್ಲಿ ಜಮಾಯಿಸಿದ ಕುಟುಂಬಸ್ಥರು ಸೋಮವಾರ ರಾತ್ರಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
PublicNext
26/05/2026 09:02 pm
LOADING...