ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳಿವೆಕೋಡಿ ಸಮುದ್ರ ತೀರದಲ್ಲಿ ಭಾನುವಾರ ಸಂಭವಿಸಿದ ಭೀಕರ ದುರಂತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಪ್ಪೆಕಲ್ಲು ಸಂಗ್ರಹಿಸಲು ಸಮುದ್ರದ ಅಲೆಗೆ ಇಳಿದಿದ್ದವರ ಮೇಲೆ ಅಲೆ ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ 8 ಮಂದಿ ಸೇರಿದಂತೆ ಒಟ್ಟು 11 ಮಂದಿ ನೀರುಪಾಲಾಗಿದ್ದರು.
ಘಟನೆ ನಡೆದ ವೇಳೆ ಸಮುದ್ರ ದಡದಲ್ಲಿದ್ದ ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ದೃಶ್ಯವನ್ನು ವಿಡಿಯೋ ಮಾಡಿದ್ದು, ಇದೀಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಸಮುದ್ರದ ನೀರು ಹೆಚ್ಚಾಗಿ ಜನರು ಮುಳುಗಿ ಹೋಗುವ ದೃಶ್ಯ ಸೆರೆಯಾಗಿದ್ದು, ಕೊನೆಯ ಕ್ಷಣಗಳಲ್ಲಿ ಸಹಾಯಕ್ಕಾಗಿ ಪರದಾಡುವ ದೃಶ್ಯ ನೋಡುಗರ ಮನಕಲಕುವಂತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ದುಃಖ ವ್ಯಕ್ತವಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಸ್ಥಳೀಯರ ಮನಸ್ಸನ್ನು ಕರಗಿಸಿದೆ. ಅಳಿವೆಕೋಡಿ ದುರಂತದ ದೃಶ್ಯ ನೋಡಿದವರು “ಇಂತಹ ದುರಂತ ಮತ್ತೆ ಮರುಕಳಿಸಬಾರದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
PublicNext
26/05/2026 10:44 am
LOADING...