ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ವಿಶೇಷ ಪೂಜೆಅತ್ಯಂತ ಸಂಭ್ರಮದಿಂದ ಸಂಪನ್ನಗೊಂಡಿತು

ಶಿರಸಿ: ಶ್ರೀ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಜ್ಯೇಷ್ಠ ಮಾಸದ ಕಾರ್ಯಕ್ರಮವು ಅತ್ಯಂತ ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ಸಂಪನ್ನಗೊಂಡಿತು.

ಪ್ರತಿ 3 ವರ್ಷಗಳಿಗೊಮ್ಮೆ ಬರುವ ಅಪರೂಪದ ಅಧಿಕ ಮಾಸದ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಅಧಿಕ ಮಾಸದಲ್ಲಿ ದೇವರಿಗೆ ವಿಶೇಷ ಸೇವೆಗಳನ್ನು ಮಾಡುವುದರಿಂದ ಅಧಿಕ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ

ಭಕ್ತಾದಿಗಳು ವಿಶೇಷ ಪೂಜೆ ನೆರವೇರಿಸಿದರು.

ಶ್ರೀ ದೇವರ ಗರ್ಭಗುಡಿಯಲ್ಲಿ ಬೆಳಿಗ್ಗೆ 8.30 ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು, ಶ್ರೀದೇವರ ಮೂಲಮೂರ್ತಿಗೆ ಶತಧಾರಕ್ಷೀರಾಭಿಷೇಕ ನೆರವೇರಿಸಿ ಬೆಳಿಗ್ಗೆ 11 ರಿಂದ ನೂತನ ಭೂ ವೈಕುಂಠ ದ್ವಾರ ಮಂಟಪದಲ್ಲಿ, ರಜತ ಪೀಠದಲ್ಲಿ ಪ್ರಧಾನ ಉತ್ಸವ ಮೂರ್ತಿಗೆ ವಿಷ್ಣು ಸಹಸ್ರನಾಮದಿಂದ ತುಳಸಿ ಅರ್ಚನೆ, ಹಾಗೂ 333 ದೀಪಾರಾಧನೆ, ದೀಪ ನಮಸ್ಕಾರ, 33 ಅಪೂಪ ಪೂಜೆ ಹಾಗೂ ದಾನ, ದ್ರವ್ಯಾಂಜಲಿ ಸೇವೆಗಳು ನಡೆದವು.

ನಂತರ ಭಕ್ತಾದಿಗಳು ಸರ್ತಿ ಸರ್ತಿ ಸಾಲಿನಲ್ಲಿ ನಿಂತು ದೇವರ ಪ್ರಸಾದವನ್ನು ಸ್ವೀಕರಿಸಿ ಸಂತುಷ್ಟಗೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.

Edited By : PublicNext Desk
PublicNext

PublicNext

09/06/2026 09:04 pm

Cinque Terre

8.77 K

Cinque Terre

0